ನಿರೂಪಣಾ ಕವನ

ವಸಂತನ ಆಗಮನ ನಿರ್ಗಮನ

Mar 28, 2025
star 5.0  (141 ಓದು) share ಹಂಚಿಕೊಳ್ಳಿ

ವಸಂತ ಋತು

ಮಾಗಿಯ ಚಳಿಯ ಹಿಂದಿಕ್ಕುತಲಿ
ಬಂತು ವಸಂತನ ಆಗಮನ.
ಮದುರಿದ ತರುಲತೆಗಳ ಅರಳಿಸಿ
ಘಮಘಮಿಸಿತ್ತು ಜಗವೆಲ್ಲ.

ಇಬ್ಬನಿ ತಬ್ಬಿದ ಪರದೆಯ ಸರಿಸಿ
ನಲಿಯಿತು ಭುವಿಯ ಒಡಲೀಗ,
ತಳಿರೆಲೆ ಚಿಗುರಿ ನಳನಳಸುತ್ತಲಿ,
ಪಿಕ ಉಲಿದಿದೆ ಮಾಮರದಲ್ಲೀಗ

ವಿಹಂಗಮವು ಅರುಣೋದಯವು,
ಹಾರುತ ಬಂದಿದೆ ಖಗ ಸಂಕುಲವು,
ಚಿತ್ತಾರವ ಬಿಡಿಸಿದೆ ನೀಲಿಯಾಗಸವು
ಇಳೆಗೆ ಬಂದಿದೆ ನವ ವಸಂತ ಋತುವು

ಮಮತಾ ಶೃಂಗೇರಿ
ಧನ್ಯವಾದಗಳು 

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ