ಪ್ರೇಮ ಕಥೆ
ಪ್ರೀತಿಯೆಂಬ ಎರಡಕ್ಷರದಲಿ
Feb 11, 2025

ಒಲವೇ ನೀ ಒಲಿದ ಕ್ಷಣದಿಂದಲೇ...❤
ಪ್ರೀತಿಯೆಂದರೆ ಎರಡು ಜೀವಗಳ ಪ್ರೀತಿಯ ಬೆಸುಗೆ ಒಬ್ಬರನೊಬ್ಬರು ತಮ್ಮ ತಮ್ಮ ಭಾವನೆಗಳಿಗೆ ಸ್ಪಂದಿಸೊದೆ ಪ್ರೀತಿ ಮನವೆರಡು ಒಂದಾಗಿ ಅರಿತುಬೆರೆತು ಜೊತೆಯಾಗಿ ಸಾಗೋದೆ ಪ್ರೀತಿ. ಅತಿಯಾದ ಪ್ರೀತಿ ಇದ್ದಲ್ಲಿ ಜಗಳವು ಸಹಜ ಆ ಜಗಳದಲ್ಲೂ ಪ್ರೀತಿಯನ್ನು ಕಾಣುವುದೆ ನಿಜವಾದ ಪ್ರೀತಿ. ಪರಿಶುಧ್ಧ ಪ್ರೀತಿಗೆ ಮನಸಿನ ಸೌಂದರ್ಯ ಮುಖ್ಯ ಬಾಹ್ಯ ಸೌಂದರ್ಯವಲ್ಲ..
ಅನು ಮತ್ತು ಅಭಿ ಒಂದು ಮಿಸ್ ಕಾಲ್ ಮೂಲಕ ಪರಿಚಯವಾಗುತ್ತಾರೆ. ಪರಿಚಯ ಗಾಢವಾದ ಸ್ನೇಹಕ್ಕೆ ತಿರುಗುತ್ತದೆ. ಎಷ್ಟು ಎಂದರೆ ಅಭಿಯ ಕಾಲ್ ಬರದೆ ಇದ್ದರೆ ಅಥವಾ ಅವನು ಅನು ಕಾಲ್ ಮಾಡಿದ್ದಾಗ ತೆಗೆಯದೆ ಇದ್ದರೆ ಅನುಳ ಮನಸಲ್ಲಿ ಏನೋ ಕಳೆದುಕೊಂಡ ತಳಮಳ ಶುರುವಾಗಿತಿತ್ತು. ಆದರೆ ಅನು ಮತ್ತು ಅಭಿ ಒಮ್ಮೆ ಸಹ ಭೇಟಿಯಾಗಿರಲಿಲ್ಲ ಎಲ್ಲಾ ಉಭಯಕುಶಲೋಪರಿ ಪೋನಿನ ಮೂಲಕವೇ ನಡೆಯುತ್ತಿತ್ತು ಅಷ್ಟೆ.
ತಂದೆತಾಯಿ ಇಲ್ಲದ ಅನುಗೆ ಅಭಿಯ ಪ್ರೀತಿ ಎಲ್ಲವನ್ನು ಮರೆಸಿತು. ಕ್ಷಣಕ್ಕೂ ಕ್ಷಣಕ್ಕೂ ತುಂಬಾ ಕೇರ್ ಮಾಡೋ ಅಭಿ ನನ್ನ ಬಾಳಸಂಗಾತಿಯಾದರೇ ಎಷ್ಟೂ ಚೆಂದ ಬಾಳು ಎಂದು ಯಾವಾಗಲೂ ತನ್ನ ಮನಸಿನಲ್ಲಿ ಅಂದುಕೊಳ್ಳುತ್ತಾಳೆ.
ಆದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಅಭಿಗೆ ಹೇಳಿದರೆ ಅವನು ಬೇಸರಮಾಡಿಕೊಳ್ಳುತ್ತಾನೆ. ಅವನು ನನ್ನ ಬಗ್ಗೆ ಏನಂದುಕೊಳ್ಳಲ್ಲ. ಅಭಿಗೆ ಕೋಪ ಬಂದು ನನ್ನ ಸ್ನೇಹವನ್ನು ಕಳೆದುಕೊಂಡರೆ ಅಯ್ಯೋ!ನನ್ನ ಬಗ್ಗೆ ತಪ್ಪಾಗಿ ತಿಳಿದುಕೊಂಡರೆ. ಅಭಿಗೆ ಒಂದವೇಳೆ ಹೀಗೂ ಹೇಳಬಹುದು ನಮ್ಮದು ನಿಶ್ಕಲ್ಮಶ ಸ್ನೇಹ ಇದಕ್ಕೆ ಪ್ರೀತಿಯೆಂಬ ಹಣೆಪಟ್ಟಿ ಹಚ್ಚಬೇಡ ಅಂತಹ ಆಲೋಚನೆ ಮಾಡಬೇಡ ಅಂದರೆ ಬೇಡ ಬೇಡ ಅಭಿ ನನ್ನಿಂದ ದೂರವಾದರೆ ನಾನು ಇರಲಾರೆ ಪ್ರೀತಿ ಸಿಗದೆ ಇದ್ದರೆ ಇಂತಹ ಪವಿತ್ರ ಸ್ನೇಹವನ್ನು ಮುಂದುವರೆಸಿಕೊಂಡು ಹೋಗುವುದೇ ಒಳ್ಳೆಯದು ಎಂದು ತನ್ನ ಮನದಲ್ಲೇ ಯೋಚನೆ ಮಾಡುತ್ತ ಇರುತ್ತಾಳೆ ಅನು.
ತನ್ನ ಪ್ರೀತಿಯನ್ನು ಅಭಿಯಲ್ಲಿ ಹೇಳದೆ ತನ್ನ ಮನಸ್ಸಿನಲ್ಲೇ ಇಟ್ಟುಕೊಳ್ಳುತ್ತಾಳೆ ಅನು.
ಒಂದು ದಿನ ಅಭಿ ನಾವು ಭೇಟಿಯಾಗೋಣ ಇನ್ನು ಎಷ್ಟು ದಿನಾ ಅಂತ ಒಬ್ಬರನೊಬ್ಬರು ನೋಡದೆ ಫೋನ್ನಲ್ಲೆ ಮಾತಾಡಿ ದಿನ ಕಳೆಯುವುದು ಹೇಳು ನಾನು ನಿನ್ನ ನೋಡಬೇಕು ನಿನ್ನ ಜೊತೆ ಮಾತಾಡಬೇಕು ಅನು ತುಂಬಾ ಮುಖ್ಯವಾದ ವಿಷಯಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಬೇಕು. ನಿನ್ನ ಮಡಿಲ ಮೇಲೆ ಮಲಗಬೇಕು ನನ್ನೆಲ್ಲಾ ನೋವು ಮರೆಯಬೇಕು ಎಂದು ಅಭಿ ಅನು ಹತ್ತಿರ ಹೇಳುತ್ತಾನೆ.
ಆಯಿತು ಸರಿಯೆಂದು ಇಬ್ಬರು ಭೇಟಿಗೆ ಒಂದು ದೇವಸ್ಥಾನ ಆಯ್ಕೆ ಮಾಡಿಕೊಳ್ಳುತ್ತಾರೆ. ಮಾರನೇ ದಿನಾನೇ ಭೇಟಿಯಾಗುತ್ತಾರೆ. ಅನುವಿಗೆ ಊಹಿಸಲಾಗದ ಆಶ್ಚರ್ಯ ಕಾದಿತ್ತು. ಅಭಿನ ಬೇಗ ಗುರುತಿಸುತ್ತಾಳೆ ಓಡಿ ಹೋಗಿ ಅಭಿನ ಹತ್ತಿರದಿಂದ ನೋಡುತ್ತಾಳೆ. ಆದರೆ ಅಭಿಗೆ ಕಣ್ಣಗಳು ಕಾಣಿಸಲ್ಲ ಇದನ್ನು ತಿಳಿದ ಅನುಗೆ ಆಘಾತಕ್ಕಿಂತ ಹೆಮ್ಮೆ ಅನಿಸುತ್ತದೆ. ಏಕೆಂದರೆ ಅಭಿಯ ಮನಸು ಪರಿಶುಧ್ಧ ಒಳಗಣ್ಣು ಸದಾ ತೆರೆದಿರುತ್ತದೆ. ಹೊರಗಣ್ಣಿನಿಂದ ಜಗ ಅಳೆಯುವುದು ತುಂಬಾ ಸುಲಭ ಆದರೆ ಅಭಿ ಅಂತವನಲ್ಲ. ಅಭಿ ಅನುವಿನ ಮಡಿಲಲ್ಲಿ ಪುಟ್ಟ ಮಗುವಂತೆ ಮಲಗಿ ತನ್ನ ಮನದ ಮಾತೆಲ್ಲವ ಅನು ಹತ್ತಿರ ಹೇಳಿಕೊಳ್ಳುತ್ತಾನೆ. ಅನು ನಾನು ನಿನ್ನನ್ನು ಮನಸಾರೆ ಪ್ರೀತಿಸುತ್ತಿದ್ದೇನೆ. ನನ್ನನ್ನು ಅರಿತುಕೊಂಡು ಭಾವಕ್ಕೆ ಭಾವ ಬೆಸೆದವಳು ನೀನು. ನೀ ಕ್ಷಣ ಕ್ಷಣಕ್ಕೂ ಮಾಡುವ ಕಾಳಜಿ ಆರೈಕೆ ನನ್ನನ್ನು ಪುಟ್ಟ ಮಗುವಿನಂತೆ ನೋಡಿಕೊಳ್ಳುವ ರೀತಿ ತುಂಬಾ ಇಷ್ಟವಾಯಿತು. ಇನ್ನು ನಾವು ಈ ಜೀವನದಲ್ಲಿ ಮದುವೆಯಾದರೆ ನನಗೆ ನೀ ಸಿಕ್ಕರೆ ಎರಡನೇಯ ತಾಯಿ ಸಿಕ್ಕಂತೆ ಸಂತಸವು ಎಂದ ಅಭಿ.
ಆಗ ಅನು ಜೋರಾಗಿ ಅತ್ತು ಬಿಡುತ್ತಾಳೆ. ಅನು ಅನು ಏನಾಯಿತು ನಾನು ಏನಾದರು ತಪ್ಪ ಹೇಳಿದ್ನಾ ನಿನ್ನ ಮನಸು ನೊಂದುಕೊಳ್ಳೊ ಹಾಗೇ ಮಾತಾಡಿದ್ನಾ ತಪ್ಪಾಯಿತು ಕಣೇ ಅಳಬೇಡ ನನಗೆ ತಡೆದುಕೊಳ್ಳಲು ಆಗಲ್ಲ. ಮನಸ್ಸಿಗೆ ತುಂಬಾ ನೋವಾಗುತ್ತದೆ ನನ್ನ ಕ್ಷಮಿಸಿಬಿಡು ಅನು ನಿನ್ನ ಮನಸನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ನನ್ನ ಸ್ವಾರ್ಥಬುದ್ಧಿಯನ್ನು ತೋರಿಸಿಬಿಟ್ಟೆ ಕಾಲಿಗೆ ಬೀಳತ್ತೀನಿ ಅಳ್ಬೇಡ ತಪ್ಪಾಗಿ ಮಾತ್ರ ತಿಳಿದುಕೊಳ್ಳಬೇಡ ಅನು. ದಯವಿಟ್ಟು ನನ್ನ ಬಿಟ್ಟಹೋಗಬೇಡ ನೀನು ಇಲ್ಲದೆ ನಾ ಬದುಕಲಾರೆ ಅನು ಅಂತ ಅಭಿ ಅಳೋಕೆ ಶುರುಮಾಡತ್ತಾನೆ. ಆಗ ಅನು ಇಲ್ಲ ಕಣೋ ನಾನೆಂತ ಪೆದ್ದಿ ನನ್ನ ಮನಸಿನ ಭಾವನೆಯೆಲ್ಲಾ ನಿನ್ನ ಮಾತಿನ ಮೂಲಕ ಹೊರಬಂದಿದೆ ಕಣೋ ನಾನು ನಿನ್ನ ತುಂಬಾ ಪ್ರೀತಿ ಮಾಡ್ತಾ ಇದ್ದೀನಿ ಕಣೋ ನೀ ಇಲ್ಲದೆ ನಾನಿಲ್ಲ ಕಣೋ ಐಲವ್ ಯೂ ಕಣೋ ಅಂತ ಅಭಿಯನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾಳೆ. ಆಗ ದೇವಸ್ಥಾನದ ಗಂಟೆ ಮೊಳಗುತ್ತೆ ಇವರ ಪ್ರೀತಿಗೆ ದೇವರ ಸಮ್ಮತಿ ಇದೆ ಅಂತಾಯಿತು ಅಲ್ಲೇ ಪಕ್ಕದಲ್ಲಿ ಕುಳಿತ್ತಿದ್ದ ವ್ಯಕ್ತಿಯ ಫೋನ್ ಕರೆ ಬರುತ್ತದೆ ಅದರ ಕಾಲರ್ಟ್ಯೂನ್ "ಒಲವೇ ನೀ ಒಲಿದ ಕ್ಷಣದಿಂದಲೇ ಈ ಭೂಮಿ ಈ ಭಾನು ಹೊಸದಾಯಿತು" ಅನ್ನೋ ಹಾಡು ರಿಂಗಣಿಸುತ್ತದೆ. ಅನು ಅಭಿಯ ಕೈ ಹಿಡಿದು ಮುುಂದೆ ಸಾಗುತ್ತಾಳೆ ಅಭಿಗೆ ಸದಾ ಕಣ್ಣಾಗಿ ಕಾವಲಾಗಿರುತ್ತಾಳೆ.
✍️ರಮ್ಯಕೃಷ್ಣಪ್ರಭು
ಮೂಡಬಿದರೆ
ಇತ್ತೀಚಿನ ಕಾಮೆಂಟ್‌ಗಳು