ಕವನಗಳು

ನೀನಿಲ್ಲದೇ...

Jun 15, 2025
star 5.0  (19 ಓದು) share ಹಂಚಿಕೊಳ್ಳಿ

ನೀನಿಲ್ಲದೇ...

ನೀನಿಲ್ಲದೇ...

ಬಾಳು ರುಚಿ ಇಲ್ಲದ ಖಾದ್ಯ
ಬದುಕೇ ಊಹಿಸಲಸಾಧ್ಯ
ನೀನಿಲ್ಲದೇ...

ಜೀವನವೆಲ್ಲಾ ಬರಿದಾದಂತೆ
ಚಿಗಿತ ಮರ ಕೊರಡಾದಂತೆ
ನೀನಿಲ್ಲದೇ...

ನಾ ಕನಸು ಹೆಣೆಯಲಾಗದು
ನನ್ನಯ ಮನಸು ತಣಿಯದು
ನೀನಿಲ್ಲದೇ...

ಕಳಕೊಳ್ಳುವೆ ಮಧುರ ಪ್ರೀತಿ
ಕಳೆದೇ ಹೋಗುವ ಆ ಭೀತಿ
ನೀನಿಲ್ಲದೇ...

ಮರೆಯದಿರು ನೀನೆಂದೆಂದೂ
ಈ ಜೀವಕೆ ಚಡಪಡಿಕೆ ಇಂದು
ನೀನಿಲ್ಲದೇ...

ಸ್ಮಿತಾಬಲ್ಲಾಳ್ (ಅಸ್ಮಿತೆ)

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ