ಕವನಗಳು

ನನ್ನ ಭಾರತ.....

Apr 08, 2025
star 5.0  (60 ಓದು) share ಹಂಚಿಕೊಳ್ಳಿ

ಭಾರತ...

ನನ್ನ ಭಾರತ 


ಭರತ ಖಂಡದ ನಾಡಿನೊಳಗೆ ಬ್ರಿಟಿಷರ ಆಸೆಪಟ್ಟು ಬಂದ ದೇಶದೊಳಗೆ ನೀತಿಗಳ ಸಾರಿ
ಸಾಧನೆಯ ಸಾಧಕರ ಪರಿಚಯಿಸಿದ ನಾಡು ನನ್ನ ಭಾರತ 

ಕಲೆ ಶಿಲ್ಪಗಳ ಭವ್ಯ ನಾಡಿನಲ್ಲಿ ಕಲಾ ವೈಶಾಲ್ಯ ತೋರಿದ ಚಿಂತಕರ ಚಿಂತನೆಯೊಳಗೆ ಮಾಡಿ ತೋರಿದ
ಅಭಿವೃದ್ಧಿಯ ದೇಶದಲ್ಲಿ ಬೇರೆ ನಾಡಿಗೆ ಬೆಳಕಾದ ನನ್ನ ಭಾರತ 

ಎಲ್ಲಿ ನೋಡಿರದ ಸೌಂದರ್ಯದ ಬೀಡಿನ ಪ್ರಕೃತಿಯ ಮನಮೋಹಕ ನೆಲೆಗಳನ್ನು ತೋರುವ
ಪರದೇಶಿಯ ಬರವಣಿಗೆ ಸಾಹಿತ್ಯದ ಕಲೆಯೊಳಗೆ ನುಡಿಮುತ್ತುಗಳಾಗಿ
ವರ್ಣಿಸಿದ ಅಕ್ಷರಗಳು ಸಾಟಿ ಇಲ್ಲದಂತಾಗಿದೆ ನನ್ನ ಭಾರತ 

ಎಲ್ಲರೂ ಒಂದಾಗಿರುವ ಜೇನಿನ ಹಾಗೆ ಭಾರತಾಂಬೆಯ ಮಡಿಲಲ್ಲಿ ಬೆಳೆದ
ದೊಡ್ಡ ಮನಸ್ಸಿನ ಹೃದಯವಂತರ ಕಂಡ ಕವಿಗಳ ಬರವಣಿಗೆಯನ್ನು
ಸಾಹಿತ್ಯಕ್ಕೆ ಭೂಷಣವಾಗಿಸಿ ಸಾಧನೆಗೈದ ದೇಶವದು ನನ್ನ ಭಾರತ 

ಈ ಸಾಧನೆಯ ಸಾಧಕರ ಕೊಟ್ಟ ನನ್ನ ಭಾರತಕ್ಕೆ
ನಾನು ಕೂಡ ಸಾಧನೆ ಕೊಟ್ಟರೆ ಸಾಧಕನೊಳಗಾಗುವೆ....

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ