ಕವನಗಳು

ಮಾನಿನಿ

Apr 16, 2025
star 5.0  (45 ಓದು) share ಹಂಚಿಕೊಳ್ಳಿ

ಬಣ್ಣಿಸಲಾರೆ ನೀ ಎಂದಿಗೂ ಹೆಣ್ಣ 

ಅರಿಯೆ ಅವಳ ಅಂತರಂಗ ಕೇಳಣ್ಣ

ಸೃಷ್ಟಿಮೂಲ ಹೆಣ್ಣು ಅವಳೇ ಜಗದ ಕಣ್ಣು

ಎಂದೆಲ್ಲಾ ಮಾತಿಗೆ ವಣಿ೯ಸುವರು ಇಲ್ಲಿ

ನಿತ್ಯದಿ ಅವಳ ಬೇಕು-ಬೇಡವ ಕಸಿದಿಹರಲ್ಲಿ

ಕೇಳುವವರು ಯಾರಿಲ್ಲಿ ಆಕೆಯ ಆಸೆ-ಆಕಾಂಕ್ಷೆ

ಅವಳ ಕನಸುಗಳಿಗಿಂದು ಬರಿದೇ ಹುಸಿ ನಿರೀಕ್ಷೆ..!

ಅರಿತಿಲ್ಲಾರು ನೋಡ ಆಕೆ ಒಡಲುರಿಯನ್ನಾ!

ಬಣ್ಣಿಸುತ ಮಾತಿನಲಿ ಬರಿದೇ ನುಡಿ ಬಣ್ಣ..! 

ನಿಂತಿಲ್ಲ ಅಡಿಗಡಿಗೆ ಶೋಷಣೆ,ಅಪಮಾನವಿನ್ನಾ..!

ಮಾನಿನಿಗೂ ಉಂಟೊಂದು ಮನಸು 

ಒಡೆಯದಿರಿ ಅವಳೊಳಗಿರುವ ಕನಸು

ಸೀಮಿತಗೊಳಿಸದಿರಿ ಹಾಕುತಲಿ ಚೌಕಟ್ಟು

ಮಾಡದಿರಿ ಅವಳ ಬದುಕನು ಬಿಕ್ಕಟ್ಟು!!

ಆಚರಿಸಲು ಅವಳಲ್ಲ ಉತ್ಸವ ಮೂರ್ತಿ

ಅವಳೆಂದೂ ಉತ್ಸಾಹ ತುಂಬುವ ಗೆಳತಿ!!!!

                            -ತಸ್ಮೈ(ರಶ್ಮಿ ಸಿ ಆರ್)




ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ