ನಿರೂಪಣಾ ಕವನ
ಮಳೆ ವರವಾಗಲಿ
Jun 04, 2024
ಮಳೆ ಇದು ವರವೈ ವರಕವಿ ಭಾವದಿ ಸುರಿಯುವ ಸುರಗಂಗೆ
ಸಾಗರದ ನೀರು ಕಾವಿನಿಂದ ಆವಿಯಾಗಿ ಅಂಬರವ ಸೇರಿ
ಮೋಡವಾಗಿ ವರ್ಷಧಾರೆಯಾಗಿ
ಧಾರುಣಿಯನು ಚುಂಬಿಸಿತು
ಭೂಒಡಲೆಲ್ಲ ಹಸಿರಿನ ಹಾಸಿಗೆ
ವನದೇವತೆ ಉಟ್ಟಳು ಚೆಂದದ ಸೀರೆ
ರೈತನ ಕೈಚಳಕದಿ ಹುಲುಸಾದ ಸಶಿ
ತೆನೆಬಾಗಿ ಭೂ ಮಾತೆಗೊಂದಿಸುತೆ
ಧಾನ್ಯ ಲಕ್ಷ್ಮಿ ಚೆಂದದಿ ಅಡಿಯಿಡಲು
ಗೃಹ ಲಕ್ಷ್ಮಿಮುದದಿ ಇದಿರುಗೊಂಡಳು
ಗದ್ದಿಗೆಯಲಿ ಕೂಡ್ರಿಸುತ ಲಕ್ಷ್ಮಿಯನು ಆದರದಿ ಪೂಜಾಲಂಕಾರವಗೈದು
ಭಕ್ತಿಯೊಳು ಬೇಡುತ ಹರಸೆಮ್ಮ
ಸುಖಶಾಂತಿ ನೆಲೆಸಲಿ ಮನೆಯಲಮ್ಮ
ಆಯುರಾರೋಗ್ಯಕರುಣಿಸೆಮ್ಮ
ಅನವರತ ಬಾಳು ಬೆಳಕಾಗಲಮ್ಮ
ಇದಕೆಲ್ಲ ಕಾರಣವು ಮಳೆಇದು ವರವೈ
ವರಕವಿಯ ಭಾವದಿ ಸುರಿಯುವ
ಸುರಗಂಗೆ ಬುವಿಯ ಕಲ್ಮಶತೊಳೆವ ಏಕೈಕ ಅಸ್ತ್ರ ವರವಾಗಿರಲಿ ಅನವರತ
ವಂದನೆಗಳು
ನಿರ್ಮಲಾ ಹೆಗಡೆ
ಇತ್ತೀಚಿನ ಕಾಮೆಂಟ್‌ಗಳು