ಕವನಗಳು

ದೇಶಪ್ರೇಮ

Jan 03, 2025
star 5.0  (864 ಓದು) share ಹಂಚಿಕೊಳ್ಳಿ



ನಮ್ಮ ನಾಡು ಶಾಂತಿಯ ಧಾಮ 
ಸಾಮರಸ್ಯವೇ ನಮ್ಮಯ ನೇಮ 
ಕ್ಷಾತ್ರ ತೇಜಕ್ಕೆ ಅನ್ವರ್ಥ ನಾಮ 
ಮನದಿ ಉಕ್ಕಲಿ ದೇಶ ಪ್ರೇಮ 

ಸ್ವರ್ಗಕೂ ಮಿಗಿಲು ನಮ್ಮ ದೇಶ 
ವೈವಿಧ್ಯಮಯವಿಲ್ಲಿ ಭಾಷೆ ವೇಷ 
ಕಳೆಯುವ ಮನದ ಜಾಢ್ಯ ಕ್ಲೇಶ 
ತಿದ್ದಿಕೊಳ್ಳುವ ನಮ್ಮ ಎಲ್ಲಾ ದೋಷ 

~ ಚೇತನ ಭಾರ್ಗವ

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ