ಕುಟುಂಬ ಮತ್ತು ಸಂಬಂಧ
ದಾನ ಮಾಡಲಾಗದ್ದು
Jun 03, 2025

ವರದಾನ
ಕನ್ಯಾದಾನವಿದೆ,
ಆದರೆ ವರದಾನವೆಂಬ ಪದ್ಧತಿ ಇಲ್ಲ.
ಮಗಳನ್ನು ಧಾರೆಯೆರೆದು ವರನಿಗೆ ಕೊಡುತ್ತಾರೆ,
ಮಗನನ್ನು ಧಾರೆಯೆರೆದು ಕೊಡುವುದಿಲ್ಲ.
ಇವರಿಗೆ ಮಗಳು ಒಬ್ಬಳೇ,
ಅವರಿಗೂ ಮಗನು ಒಬ್ಬನೇ.
ಸಾಕಿ ಸಲುಹಿದ ಹೆತ್ತವರು ಇಬ್ಬರಿಗೂ ಅವಶ್ಯಕ –
ಬಿಟ್ಟು ಬಿಡಲಾಗದು, ಅರಿತು ಬಾಳುವುದೇ
ಗೃಹಸ್ಥಾಶ್ರಮದ ಧರ್ಮ.
ಕನ್ಯಾದಾನ ಮಾಡಿ ಪುಣ್ಯ ಪಡೆದ ಮಗಳ ಹೆತ್ತವರು,
ಅಳಿಯನನ್ನು ದಾನವಾಗಿ ಅಲ್ಲ –
ವರವಾಗಿ ಪಡೆದರು.
ಅದು ವರದಾನವಲ್ಲ, ಕನ್ಯಾದಾನದ ಪುಣ್ಯದ ಫಲ.
ಕನ್ಯಾದಾನ ಮಾಡಿ ಅವರಿಗೆ ವಧು
ಸೊಸೆಯಾಗಿ ಅಲ್ಲ, ಮಗಳಾಗಿ ಸಿಕ್ಕಳು.
ವರದಾನ ಮಾಡದೆ ಇವರಿಗೆ ವರ
ಅಳಿಯನಾಗಿ ಅಲ್ಲ, ಮಗನಾಗಿ ಸಿಕ್ಕನು.
✍️ ಅನೂಷ ನೀಲೇಶ್
ಇತ್ತೀಚಿನ ಕಾಮೆಂಟ್‌ಗಳು