ನಿರೂಪಣಾ ಕವನ

ಬರೆಯದ ಕವಿತೆ

Jul 20, 2024
star 4.0  (10541 ಓದು) share ಹಂಚಿಕೊಳ್ಳಿ

ಮುಗಿಲು ಸುರಿದ ಮೌನವನು
ಉರುಹೊಡೆವ ಭೂಮಿ
ಬಿಸಿಲು ಬರೆದ ಚಿತ್ರಕ್ಕೆ
ಬಣ್ಣ ತುಂಬುವ ಗಾಳಿ
ಇಬ್ಬನಿ ‌ಹುಂಡ ದಿಟ್ಟಿಸಿ
ಮುಂಗುರುಳು ತೀಡಿ
ನಸುನಕ್ಕ ಭತ್ತದ ತೆನೆ
ಗದ್ದೆ ಹಾಳಿಯ ಮಧ್ಯೆ
ಹೊಳೆವ ಅಪ್ಪನ ಹೆಜ್ಜೆ
ಹೆಸರಿರದ ಹಕ್ಕಿ
ಹೊಸ ಹಾಡು ಹೇಳಿದರೆ
ಪದವಿರದ ಸಾಲು
ಜಗವನ್ನೇ ತಬ್ಬುತಿದೆ
ಕಿತ್ತ ಕಳೆಗಿಡದಲ್ಲೂ
ಹೊಳೆಯುತಿದೆ ಕವಿತೆ

-ಮಾನಸಾ ಹೆಗಡೆ

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ