ಕವನಗಳು

ಬದುಕೊಂದು ರಣರಂಗ...

Jan 03, 2025
star 5.0  (270 ಓದು) share ಹಂಚಿಕೊಳ್ಳಿ

ಜೀವನ ಎಂಬುವುದು ಯುದ್ಧ ಭೂಮಿಯಂತೆ...
ನಿನ್ನವರೊಂದಿಗೆ ನೀ ಹೋರಾಡಿ ಗೆಲ್ಲಬೇಕಂತೆ...
ಬದುಕೆಂಬ ಈ ರಣರಂಗದಲ್ಲಿ,
ಹೋರಾಡಿ ಗೆಲ್ಲುವವರೆಷ್ಟೋ...
ಸೋತು ಮಣ್ಣಾಗುವವರೆಷ್ಟೋ...

ನಿತ್ಯವೂ ಹೊಸ ಬಗೆಯ 
ತಂತ್ರ ಪ್ರತಿತಂತ್ರಗಳ ಲೆಕ್ಕಾಚಾರವಂತೆ...
ಕಾರ್ಯ ಸಾಧನೆಗಾಗಿ ನಂಬಿದವರಿಗೆ
ದ್ರೋಹ ಮಾಡುವುದಂತೆ...
ಬದುಕೆಂಬ ಈ ಸಂತೆಯಲ್ಲಿ,
ಸತ್ಯದ ಹಾದಿ ತುಳಿದವರೆಷ್ಟೋ...
ಸುಳ್ಳಿನ ಮುಖವಾಡ ತೊಟ್ಟವರೆಷ್ಟೋ...

ಜೀವನವೇ ಒಂದು ನಾಟಕ ರಂಗವಂತೆ...
ಮೇಲ್ನೋಟಕ್ಕೆ ತೋರ್ಪಡಿಸುವ ಪ್ರೇಮವಂತೆ...
ಬದುಕೆಂಬ ಈ ಚಿತ್ರಮಂದಿರದಲ್ಲಿ,
ಅಸಲಿ ಸಂಬಂಧಗಳ ಲೆಕ್ಕವೆಷ್ಟೋ...
ಬಣ್ಣ ಹಚ್ಚಿ ನಟಿಸುವವರೆಷ್ಟೋ...

            ✍️ಮೇಘನ ಶಿವಮಿತ್ರಾ

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ