ನಿರೂಪಣಾ ಕವನ

ಸುರಿಯುತಿದೆ ವರ್ಷಧಾರೆ..ಬುವಿಯಾಯಿತು ಜಲಧಾರೆ

Jun 05, 2024
star 4.3  (28559 ಓದು) share ಹಂಚಿಕೊಳ್ಳಿ

ವಸುಂಧರೆ ಒಣಗಿ ಬಿರುಕುಬಿಟ್ಟು 

ನೀರಿಗಾಗಿ  ಹಂಬಲಿಸಿ ಕಾಯುತಿರೆ

ಮಯೂರ ನರ್ತಿಸಿ ಕರೆಯುತಿರಲು

ರೈತ  ಬಿತ್ತನೆಗೆ ವರುಣನನ್ನು ನಿರೀಕ್ಷಿಸಲು


 ವರುಣನಾಗಮನ ಭುವಿಗೆ  ನಿಧಾನಿಸಿ

ದಿನಕಳೆದಂತೆ ಆರ್ಭಟವಾಯಿತು

ವರ್ಷಧಾರೆಯ  ಅಟ್ಟಹಾಸ

ಎಲ್ಲೆಲ್ಲೂ ವರುಣನ   ರುದ್ರ ನರ್ತನ


ಜಗದೆಲ್ಲೆಡೆ ಸಾವು ನೋವಿನ ಚೀತ್ಕಾರ

ಶಾಲಾ ಕಾಲೇಜಿಗೆ ರಜಾದ ಘೋಷಣೆ

ತುಂಬಿಹರಿಯುವ ನದಿನದಗಳು

ಮನಸೆಳೆಯುವ ಜಲಪಾತಗಳು


ಜಲಧಾರೆಯಿಂದ ನಲುಗಿದ ವಸುಂಧರೆ

ನಾಟ್ಯವನ್ನು ಮರೆತ ನವಿಲನ ಒದ್ದಾಟ

ಅತಿವೃಷ್ಟಿಯಿಂದ  ಕಂಗಾಲದ ರೈತ

ವರುಣನಿಗೆ ಶರಣಾಗಿದ್ದಾರೆ ಒಟ್ಟಿಗೆ


ನಿಲ್ಲಿಸು ನಿನ್ನ ಈ  ವರಟು ನಾಟ್ಯವನ್ನು

ಬದುಕ ಹಸನಾಗಿಸು ನಮ್ಮೆಲ್ಲರದನ್ನು

ಕೊಚ್ಚಬೇಡ ಭೂತಾಯಿಯ ಒಡಲನ್ನು

ಶಾಂತವಾಗಿ ಮರಳು ನಿನ್ನ ಸ್ಥಳಕೆ ನೀನು


ವಂದನೆಗಳು

ನಿರ್ಮಲಾ ಹೆಗಡೆ


ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ