ವಿಡಂಬನಾತ್ಮಕ ಕವನ

ನರಸಿಂಹರ ಮಗಳು

Jul 08, 2024
star 4.0  (10165 ಓದು) share ಹಂಚಿಕೊಳ್ಳಿ

ನರಸಿಂಹರ ಮಗಳು,
ಮಹಾಲಕ್ಷ್ಮಿಯಂತವಳು,
ಆಕೆಯಂತಹ ಹುಡುಗಿ
ಊರಲಿಲ್ಲ.
ಕಪ್ಪು ತೀಡಿದ ಹುಬ್ಬು
ಗೆಜ್ಜೆ ಕಟ್ಟಿದ ಕಾಲು
ಮಾಣಿ ಹುಡುಕುವ ಸುದ್ದಿ
ಊರಲೆಲ್ಲ.
ಕಪ್ಪಿರಲಿ, ಬಿಳುಪಿರಲಿ
ಗಾಯತ್ರಿ ಬಿಡದಿರಲಿ
ಅಂತ ಹುಡುಗನೇ ಬೇಕು
ಆಕೆಯೊಡನೆ
ಹುಡುಕಿಹರು ಜೋಯಿಸರು
ಊರೆಲ್ಲ ತಿರುಗಿ
ಕೆದಕಿಹರು ಜಾತಕವ ಒಂದೆ
ಸಮನೆ.
ಮಂಗಳೂರಿನ ಮಾಣಿ
ಬೆಂಗಳೂರಿನ ಮಾಣಿ
ಕೂಸು ನೋಡಿದರೆಲ್ಲ
ಮನೆಗೆ ಬಂದು
ಒಬ್ಬ ಕುಡಿಯುತ್ತಾನೆ
ಒಬ್ಬ ಕುಂಟುತ್ತಾನೆ
ಒಲ್ಲೆಯೆಂದಳು ಆಕೆ
ಬೇಡವೆಂದು.
ಬಂದ ಬಂದವರೆಲ್ಲ
ಬಂದು ಹೋದರು ನೋಡಿ
ಯಾವ ಮಾಣಿಯ ಜಾತಕ
ಕೂಡಲಿಲ್ಲ.
ಗಣಕೂಟ ಸೇರಿದರೆ
ಮುಹೂರ್ತ ಒಪ್ಪಿದರೆ
ಕೇಸರಿಯೇ ಹಾಕಿಸುವುದು
ತಡವೇ ಇಲ್ಲ.
- ನಾಗರಾಜ್ ಬಾಳೆಗದ್ದೆ

ಇತ್ತೀಚಿನ ಕಾಮೆಂಟ್‌ಗಳು
ಇದನ್ನು ವರದಿ ಮಾಡಿ
X