ಕವನಗಳು

ಮಂಗಳದ ಮುಂಬೆಳಗು

Mar 12, 2025
star 5.0  (59 ಓದು) share ಹಂಚಿಕೊಳ್ಳಿ

ನೇಸರನ ಆಸರೆ

ದೇದೀಪ್ಯಮಾನ ಅರ್ಕನ 
ಮಂಗಳದ ಮುಂಬೆಳಗು
ಜೀವರಾಶಿಗಳ ಅರಳಿಸಿ
ತುಂಬಿದೆ ಮೆರುಗು 

ಬೇಧಭಾವ ಎಣಿಸದ 
ಭಾಸ್ಕರನ ಬೆಳಕು
ಕಪಟವಿಲ್ಲದ ನಿತ್ಯಸತ್ಯ
ಹೊನಲ ಪಲುಕು 

ಉಷೆಯ ಪ್ರಭೆ ಸೋಕೆ 
ನಗುವ ತಂಬೆಲರು 
ಪ್ರಾಣ ಚೈತನ್ಯದಿ 
ಹಸಿರಾಯ್ತು ಉಸಿರು

ಇರುಳ ನೀಗುತ
ನಾಳೆಯ ಭರವಸೆ ಕೊಟ್ಟು 
ಪ್ರತಿ ಹೊಸ ಬೆಳಗು
ತರುವುದು ಮರುಹುಟ್ಟು

ಕಾಣುವ ಅಷ್ಟೂ ಕಣ್ಣಲೂ 
ನೇಸರನ ಪ್ರಖರತೆ ದಾಖಲು
ಸಾರ್ಥಕತೆ ಪಡೆಯುವ 
ಛಲ-ಬಲ ಇರದು ಎಲ್ಲರಲು 

ನಮ್ಮೊಳಗೆ ಮಲಗಿರುವ 
ಧೀಶಕ್ತಿಯ ತುಣುಕು
ಎಚ್ಚೆತ್ತ ಘಳಿಗೆ ಅಂತರಂಗದಿ 
ನವ ಬೆಳಗು ನವ ಬದುಕು

     ..........✍️ಮಮತ ಆರಾಧ್ಯ 

ಇತ್ತೀಚಿನ ಕಾಮೆಂಟ್‌ಗಳು
ಇದನ್ನು ವರದಿ ಮಾಡಿ