ಕುಟುಂಬ ಮತ್ತು ಸಂಬಂಧ
ಭಾವನೆಗಳ ಬಣ್ಣ
Mar 13, 2025

ಬದುಕೆಂಬುದು ಬಿಳಿಯಪಟ ಇದ್ದಂತೆ . ಇಲ್ಲಿ ವಿಶ್ವಾಸವೆಂಬ ಕುಂಚದಿಂದ ಭಾವನೆಗಳೆಂಬ ರಂಗನ್ನು ಮೂಡಿಸುತ್ತ ಜೀವನದ ಚಿತ್ರವನ್ನು ರಚಿಸಬೇಕು . ಕಾಮನಬಿಲ್ಲಿನಲ್ಲಿ ಹೇಗೆ ಏಳು ಬಣ್ಣಗಳಿರುತ್ತದೆಯೋ ಹಾಗೆ ಮನಸಲ್ಲಿ ಪ್ರೀತಿ ಮಮತೆ ಭ್ರಾತೃತ್ವ ಮೊದಲಾದ ಸದ್ಭಾವನೆಗಳ ಬಣ್ಣಗಳನ್ನು ಮೂಡಿಸಿಕೊಳ್ಳಬೇಕು
ಬಣ್ಣಗಳು ನಮ್ಮ ಬದುಕಿನ ರಂಗನ್ನು ಹೆಚ್ಚಿಸುತ್ತವೆ . ಕೆಂಪು ಪ್ರೀತಿಯ ಸಂಕೇತ ವಾದರೆ ಹಸಿರು ಸಮೃದ್ಧಿಯನ್ನು ಸೂಚಿಸುತ್ತದೆ ,ಗುಲಾಬಿ ಬಣ್ಣ ಸ್ನೇಹವನ್ನು ಕಿತ್ತಳೆ ಬಣ್ಣ ಜ್ಞಾನವನ್ನು ಹಳದಿ ಬಣ್ಣವು ಸಂಭ್ರಮವನ್ನು ಹಾಗೂ ನೇರಳೆ ಬಣ್ಣವು ಸಂಪತ್ತನ್ನು ಸೂಚಿಸುತ್ತದೆ , ಬಿಳಿಯ ಬಣ್ಣವು ಶಾಂತಿಯ ದ್ಯೋತಕ .
ಬಣ್ಣಗಳ ಹಬ್ಬ ಹೋಳಿಯು ಫಾಲ್ಗುಣಮಾಸದ ಪೌರ್ಣಮಿಯಂದು ಆರಂಭವಾಗುತ್ತದೆ . ಎರಡು ದಿನಗಳ ಕಾಲ ಆಚರಿಸಲಾಗುತ್ತದೆ . ಮೊದಲ ದಿನ ಕೆಟ್ಟ ಶಕ್ತಿ , ಅಸೂಯೆ ,ದ್ವೇಷಗಳೆಲ್ಲಾ ಸುಟ್ಟುಹೋಗಲಿ ಎಂದು ಹೋಳಿ ದಹನ ಮಾಡುತ್ತಾರೆ . ಎರಡನೇ ದಿನ ಪ್ರೀತಿ , ವಿಶ್ವಾಸ ,ಸಂತೋಷ , ಸಂಪತ್ತು ಹೆಚ್ಚಾಗಲಿ ಎಂದು ವಿಧ ವಿಧದ ಬಣ್ಣಗಳನ್ನು ಎರಚುತ ಸಿಹಿಯನ್ನು ತಿನ್ನಿಸುತ್ತಾ ಬಣ್ಣ ಬಣ್ಣದ ರಂಗೋಲಿಯನ್ನು ಹಾಕಿ ಸಂಭ್ರಮಿಸುತ್ತಾರೆ
ಒಟ್ಟಿನಲ್ಲಿ ಬಣ್ಣಗಳ ಲೋಕದಲ್ಲಿ ಸುಮಧುರವಾದ ಭಾವನೆಗಳನ್ನು,ಎಲ್ಲರಲ್ಲೂ ಬಂಧುತ್ವನ್ನು ಬೆಳೆಸಿಕೊಳ್ಳುತ್ತಾ ಉತ್ತಮವಾದ ಬದುಕನ್ನು ಕಟ್ಟಿಕೊಳ್ಳೋಣ .
~ಚೇತನ ಭಾರ್ಗವ
ಇತ್ತೀಚಿನ ಕಾಮೆಂಟ್‌ಗಳು