ಕವನಗಳು
ಅತಿಥಿ
Mar 12, 2025

ಮತ್ತದೇ
ಸ್ವರ,
ಅದೆ
ರಾಗ,
ಮರಳಿ
ಎದುರು
ಬಂದಿದೆ,
ಮತ್ತದೇ
ಹಾಡು,
ಅದೆ
ಭಾವ,
ಹಳೆಯ
ನೆನಪ
ತಂದಿದೆ,
ಅಂದಿನಂತೆಯೆ
ಇಹುದಿಂದು
ತಾಳ,
ಅಂದಿನಂತೆಯೆ
ಶೃತಿಯಿಂದಿಹುದು,
ಅಂದಿನಂತೆಯೆ
ನಾದ,
ಬಾಳ,
ತಂತಿಯ
ಮೇಲೆ
ಮೂಡಿಹುದು,
ಇಂದಿನ
ಬೆಳಕಿನಲಿ
ಅಂದಿನೇ
ಛಾಯೆ,
ಇಂದು
ಸಂಗೀತದಲಿ
ಅಂದಿನದೇ
ಮಾಯೆ,
ಅಂದಾಗಿತ್ತದುವೆ ಬಾಳ್ವೆಯ ರೀತಿ,
ಇಂದು
ತಾ
ಮರಳಿಹುದು
ತಾನಾಗಿ
ಅತಿಥಿ...
- ಸ.ಪ.ಸ.
ಇತ್ತೀಚಿನ ಕಾಮೆಂಟ್‌ಗಳು