ಕವನ ವಾಚನಗೋಷ್ಠಿಗಳು

ಕರ್ಮಫಲ

Jan 05, 2025
star 3.0  (1103 ಓದು) share ಹಂಚಿಕೊಳ್ಳಿ

ಶೀರ್ಷಿಕೆ: ಕರ್ಮಫಲ


ಎಷ್ಟು ಪ್ರವಚನ ಕೇಳಿದರೇನು ಫಲವು, 
ಎಮ್ಮ ಮನವು ಶುದ್ಧವಿಲ್ಲದೆ.
ಎಷ್ಟು ತೀರ್ಥಸ್ನಾನ ಮಾಡಿದರೇನು ಸಿದ್ಧಿ, 
ಎಮ್ಮ ಆತ್ಮ ಶುದ್ಧವಿಲ್ಲದೆ.

ಏಸು ಭಜನೆ ಮಾಡಿದರೇನು ನಾವು
ನಮ್ಮ ಮನದಿ ಸ್ಮರಣೆ ಇಲ್ಲದೆ.. 
ಎನಿತು ಪೂಜೆಯೊಳು ಸಿಗುವುದೇನು, 
ತನ್ನನ್ನು ತಾನು ನಂಬದೆ.

ಅರಿವು ಇರದೆ ಮಾಡಿದಂತ ಕರ್ಮಗಳು
ನಮ್ಮ ಬಿಟ್ಟು ಹೋದರೂ, 
ಅರಿತು ಇಚ್ಚಿಸಿ ತಾ ಹರಿದು ಉಂಬಲು, 
ಹರಿಯು ಹರನೂ ಕಾಯ್ವರೇ. 

ಕರ್ಮಫಲವು ಬಿಡದೇ ಬಹುದು, 
ಎಷ್ಟು ಜನುಮ ತಳೆದರೂ, 
ಒಳಿತು ಮಾಡುತಿರಲಷ್ಟೇ ಸಾಕು, 
ಎಲ್ಲ ಕಷ್ಟ ಕಳೆವುದು. 

ಪರೋಪಕಾರ, ಉಪಕಾರ ಸ್ಮರಣೆ
ಇರಲು ಬೇಕು ಮನುಜಗೆ, 
ಪುಣ್ಯಫಲದ ಆಸೆ ಬಿಟ್ಟರಷ್ಟೇ ಸನಿಹ
ನಮ್ಮ ಭವದ ಮುಕ್ತಿಗೆ. 

ಧನ್ಯವಾದಗಳು 
ಮಮತಾ ಶೃಂಗೇರಿ

ಆಡಿಯೋಗಳು : 1
play_circle ಪ್ಲೇ ಮಾಡಿ
1  
ಕರ್ಮಫಲ
ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ