ಕವನಗಳು

ಸ್ವಪ್ನವಂತನ ಸುಮರಾಣಿ

Jul 08, 2024
star 5.0  (6064 ಓದು) share ಹಂಚಿಕೊಳ್ಳಿ

ಸುಮನೋಹರಿಯ ಸನಿಹದ

ಆ ಕ್ಷಣ ರೋಮಾಂಚನ ;

ಸಹಜ ಸೌಂದರ್ಯದ ಆರಾಧಕನ

ತಪಸ್ಸಿಗೆ ಪ್ರತ್ಯಕ್ಷವಾದ ಸುರತಿಯ

ಮುಗುಳ್ನಗುವೆ ಸಾಕು ಜೀವಕೆ.


ಪದಗಳು ಸೋಲುತಿವೆ

ಕವಿತೆಯಾಗಲು.......

ರಾಗವೂ ನಾಚುತಿದೆ

ಹಾಡಾಗಲು.......

ಮೇಘವೂ ಮೈ ಮರೆಯುತಿದೆ

ಮರೆತು ಮಳೆ ಸುರಿಸುತಿದೆ

ಮಳೆಯಲ್ಲಿ ನೆನೆದ ಅವಳ

ಮೊಹಕ ಭಾವವ ಸವಿಯಲು 

ಇನ್ನೂ ಚಂದವೆಂದು.


ಮಾತಿರದೆ ಎದುರಾದಳು

ಮೌನದಲೇ ಮಾತಾಡುತ.

ಕಣ್ ನೋಟವೊಂದೆ ಹೇಳಿತು

ಹೇಳಲಾಗದ ಸ್ವಗತ

ನಸುನಗುತ.


ಕುಸುಮ ರಾಶಿಯ ಮಧ್ಯದಿಂದ

ಎದ್ದು ನಿಂತ ಕಾವ್ಯಕನ್ನಿಕೆ

ಕನಸಲ್ಲೂ ಕಾಡಿದ್ದೇತಕೆ?

ಸ್ವಪ್ನವಂತನ ದಿನಚರಿಗೆ 

ಹಾಜರಾಗುವ ಹುನ್ನಾರ

ಅವಳಿಗೆ ಮಾತ್ರ ಯಾಕೆ?


ಸುಮರಾಣಿಯಲ್ಲವೇ ಅದಕ್ಕಿರಬಹುದು.


● ಅಜಯ್ ಅಂಗಡಿ

ಇತ್ತೀಚಿನ ಕಾಮೆಂಟ್‌ಗಳು
ಇದನ್ನು ವರದಿ ಮಾಡಿ
X