ಸಣ್ಣ ಕಥೆಗಳು
ಸಾನಿಕಾಳ ಸಾಧನೆಯ ಹಿರಿಮೆ
Feb 03, 2026
ಸಾನಿಕಾಳ ಸಾಧನೆಯ ಹಿರಿಮೆ
ಸಾನಿಕಾಳ ಸಾಧನೆಯ ಹಿರಿಮೆ
ಸಾನಿಕ ಪುಟ್ಟ ವಯಸ್ಸಿನ ಮಗುವಿನಿಂದಲೂ ಕರಕುಶಲ ವಸ್ತುಗಳ ತಯಾರಿಕೆ, ಚಿತ್ರ ಬರೆಯುವಿಕೆ ಅವಳ ಹವ್ಯಾಸವಾಗಿತ್ತು. ಅವಳ ಹವ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದರು, ಅವರ ತಂದೆ ತಾಯಿಗಳಾದ ಗೀತಾ ಮತ್ತು ಗೋವಿಂದ ದಂಪತಿಗಳು. ಸಾನಿಕಳಿಗೆ ಬೇಕಾದ ತಯಾರಿಕಾ ವಸ್ತುಗಳನ್ನು ಕೂಡಿಸಿ ಪ್ರೋತ್ಸಾಹವನ್ನು ನೀಡುತ್ತಿದ್ದರು. ಆದರೆ ತಂದೆ ತಾಯಿಗಳು ಸಾನಿಕಾ ಒಬ್ಬ ದೊಡ್ಡ ವೈದ್ಯೆಯಾಗಬೇಕು ಎಂಬ ಕನಸನ್ನು ಕಾಣುತ್ತಿದ್ದರು. ಆದರೆ ಸಾನಿಕಾಳಿಗೆ ಕರಕುಶಲ ವಸ್ತುಗಳ ತಯಾರಿಕೆಯಲ್ಲಿರುವಷ್ಟು ಆಸಕ್ತಿ ವೈದ್ಯೆಯಾಗಬೇಕು ಎಂಬುದರಲ್ಲಿ ಇರಲ್ಲಿಲ್ಲ.
ಅದರಿಂದ ಅವರ ತಂದೆ ತಾಯಿಗಳು ಮತ್ತು
ಸಾನಿಕಾಳ ಮಧ್ಯೆ ಆಗಾಗ ಭಿನ್ನಾಭಿಪ್ರಾಯಗಳು ಬರುತ್ತಿದ್ದವು. ಅಕ್ಕಪಕ್ಕದ ಮನೆಯವರು ಕೂಡ ಏನೋ ಸಾನಿಕ ತಕ್ಕಮಟ್ಟಿಗೆ ಓದುತ್ತಾಳೆ.ಒಳ್ಳೆಯ ಕೆಲಸ ಹುಡುಕಬೇಕು? ಒಳ್ಳೆಯ ಹುದ್ದೆಯನ್ನು ಪಡೆಯಬೇಕೆಂಬ ಆಸೆ ಇಲ್ಲವೇ?.. ಎಂದು ಸಾನಿಕಾಳ ತಂದೆ ತಾಯಿಗಳಿಗೆ ಕೇಳುತ್ತಿದ್ದರು. ಇದರಿಂದ ಸಾನಿಕಾಳ ತಂದೆ ತಾಯಿಗಳಿಗೆ ಬೇಜಾರು ಮತ್ತು ಅವರ ಮಗಳು ಅವರ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ಭಾವ ಅವರಲ್ಲಿ ಬೇರೂರಿಕೊಂಡಿತು. ಇದರಿಂದ ಯಾವಾಗಲೂ ಆ ವಿಷಯದ ಚರ್ಚೆ ಮನೆಯಲ್ಲಿ ಬಂದಾಗ ಸಾನಿಕಳಿಗೆ ಮನಸ್ತಾಪವಾಗಿ ಬೇಜಾರಿನಲ್ಲೇ ಇರುತ್ತಿದ್ದಳು.
ಸಾನಿಕಾಳು ಕಸ ಎಂದು ಬಿಸಾಕಿರುವ ವಸ್ತುಗಳನ್ನು ಉಪಯೋಗಿಸಿ ಆಕರ್ಷಕವಾದ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದಳು, ಈರುಳ್ಳಿ ಸಿಪ್ಪೆಯಿಂದ ಕಲಾಕೃತಿಗಳು, ತೆಂಗಿನಕಾಯಿ ಕರಟದಿಂದ ಕಲಾಕೃತಿಗಳು, ಪೆನ್ಸಿಲ್ ಸಿಪ್ಪೆಯಿಂದ ಕಲಾಕೃತಿಗಳು. ಹೀಗೆ ಹಲವಾರು ಕಸ ಎಂದು ಬಿಸಾಕುವ ವಸ್ತುಗಳನ್ನು ಉಪಯೋಗಿಸಿ ವಿವಿಧ ಕಲಾಕೃತಿಗಳನ್ನು ರಚಿಸುತ್ತಿದ್ದಳು. ಈ ಬೇಜಾರಿನ ನಡುವೆಯು ಕಲಾಕೃತಿ ತಯಾರಿಕೆಯನ್ನು ಯಾವತ್ತಿಗೂ ನಿಲ್ಲಿಸದ ಸಾನಿಕಾಳು, ತನ್ನ ಸಾಧನೆಯನ್ನು ಪ್ರತಿದಿನ ಮಾಡುತ್ತಾ ಬಂದಳು.
ಅದೇ ತರ ಅವಳು ಶಾಲೆಯನ್ನು ಮುಗಿಸಿ ಇನ್ನೇನು ಕಾಲೇಜ್ ಮೆಟ್ಟಿಲು ಹತ್ತುವ ವರ್ಷದಲ್ಲಿ ಒಬ್ಬ ಕಲಾಕಾರಳು ಎನ್ನುವ ಮಟ್ಟಿಗೆ ಜನರಿಂದ ಗುರುತಿಸಲ್ಪಟ್ಟಳು. ಮಹಿಳಾ ಸಂಸ್ಥೆಯೊಂದು ಅವರ ಮನೆಗೆ ಬಂದು ತಮ್ಮ ಕಲಾಕೃತಿ ಪ್ರದರ್ಶನವನ್ನು ಏರ್ಪಡಿಸಲು ಅವರಿಗೆ ಅನುಮತಿ ಕೇಳಿದಾಗ ಖುಷಿಯಿಂದ ಸಾನಿಕಾಳು ಒಪ್ಪಿದಳು. ಇದರಿಂದ ದಿನಪತ್ರಿಕೆಯಲ್ಲೂ ಕೂಡ ಅವಳ ಹೆಸರು ಭಾವಚಿತ್ರ ಪ್ರಕಟಗೂಂಡಿತು.ಇದನ್ನು ನೋಡಿ ಅಕ್ಕಪಕ್ಕದ ಜನರಿಗೆ ಖುಷಿಗಿಂತಲೂ ...ಆಶ್ಚರ್ಯವೇ ಆಯಿತು.
ಹೀಗೆ ಸಣ್ಣಪುಟ್ಟ ಕಲಾಕೃತಿ ಪ್ರದರ್ಶನಗಳನ್ನು ನೀಡುತ್ತಾ, ತನ್ನ ಕಲಾಕೃತಿಯನ್ನು ಇಷ್ಟಪಟ್ಟವರಿಗೆ ಮಾರುತ್ತ, ತನಗೆ ಬೇಕಾಗುವ ಸಾಮಗ್ರಿಗಳನ್ನು ತಾನೇಕೊಳ್ಳುವಷ್ಟು ಮತ್ತು ತನಗೆ ಬೇಕಾದ ಅಗತ್ಯತೆಗಳನ್ನು ಪೂರೈಸುವಕೊಳ್ಳುವ ಮಟ್ಟಕ್ಕೆ ಸಾನಿಕ ಬೆಳೆದಳು. ನಂತರ ಬೇರೆ ಬೇರೆ ವಸ್ತುಗಳಿಂದ ಬೇರೆ ಬೇರೆ ರೀತಿಯ ಕಲಾಕೃತಿ ತಯಾರಿಕೆಯಲ್ಲಿ ನಿಪುಣತೆ ಪಡೆದಳು. ಇದೇ ಸಮಯದಲ್ಲಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಅಲ್ಲಿ ಇವಳ ಹೆಸರು ಕೂಡ ನಮೂದಿಸಲ್ಪಟ್ಟಿತು. ಇದರಿಂದ ಸಾನಿಕಾಳ ಸಾಧನೆಯನ್ನು ಅವಳ ಹಿರಿಮೆಯನ್ನು, ಆಗ ಮನಗೊಂಡ ಅಕ್ಕಪಕ್ಕದ ಜನರು, ಮತ್ತು ಸಾನಿಕಳ ತಂದೆ ತಾಯಿಗಳು ಅವಳ ಸಾಧನೆಯ ಹಿರಿಮೆಯನ್ನು ಕಂಡು ಅವಳನ್ನು ಕೊಂಡಾಡಿದರು.
ನೀತಿ ಪಾಠ :
1. ಯಾವ ಕೆಲಸವೂ ಕನಿಷ್ಠವಲ್ಲ.
2. ಶ್ರದ್ಧೆಯಿಂದ ನಿನ್ನ ಕೆಲಸವನ್ನು ಮಾಡು
3. ನಿನ್ನ ಮೇಲೆ ನಿನಗೆ ನಂಬಿಕೆ ಗಾಢವಾಗಿರಲಿ
-ಪಲ್ಲವಿ ನರಗುಂದೆ
ಇತ್ತೀಚಿನ ಕಾಮೆಂಟ್‌ಗಳು