ಕವನಗಳು

ವನಿತೆಯರ ವಿಜಯ

Nov 04, 2025

ಗಂಡು ಮಕ್ಕಳ ಆಟವೇಕೆಂಬ
ಮಾತುಗಳೆಡೆಗೆ ಕಿವಿಗೊಡದೆ
ಸಾಧನೆಗೆ ಸ್ಪೂರ್ತಿಯಾದವರಿವರು 

ದಶಕ ದಶಕಗಳಿಂದ ಕಂಡಿದ್ದ ಕನಸನ್ನು
ಸಾಕಾರಗೊಳಿಸಿದ ಬಾಲೆಯರಿವರು
ದೇಶಕ್ಕೆ ವಿಶ್ವಕಪ್ ಎಂಬ ಗರಿಯನ್ನಿತ್ತರು

ನಮ್ಮ ಹೆಮ್ಮೆಯ ಮಹಿಳಾಮಣಿಗಳಿವರು
ಒಬ್ಬೊಬ್ಬ ಆಟಗಾರ್ತಿಯರಲ್ಲೂ
ಅಡಗಿವೆ ಒಂದೊಂದು ಯಶಸ್ಸಿನ ಕಥೆಗಳು 

ಸುಲಭವಿರಲಿಲ್ಲ ಸಾಧನೆಯ ಹಾದಿಯು
ಸೋಲು ಅಪಮಾನಗಳ ಮೆಟ್ಟಿ ನಿಂತು
ರಾಷ್ಟ್ರಕ್ಕೆ ತಂದರು ಗೆಲುವಿನ ಹಿರಿಮೆಯ

ಛಲಗಾರ್ತಿ ವನಿತೆಯರ ವಿಜಯವಿದು
ಕೋಟ್ಯಾಂತರ ಜನರ ಆಶೀರ್ವಾದ ಪಡೆದು
ತಾಯ್ನಾಡಿನ ನೆಲದಲ್ಲಿ ಗೆದ್ದು ಬೀಗಿದರು

ನೋವು ಹತಾಶೆಗಳ ಕಣ್ಣೀರನ್ನು ಒರೆಸಿ
ಹಾರಿಸಿದರು ವಿಜಯದ ಪತಾಕೆಯ
ಗೆಲುವಿನ ನಗೆಯಲ್ಲಿ ಕಂಡೆವು ಆನಂದ ಭಾಷ್ಪವ

✍️ ಧನು





ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ