ನಿರೂಪಣಾ ಕವನ

ಮಹಿಳಾ ವಿಶ್ವಕಪ್ ಕ್ರಿಕೆಟ್

Nov 04, 2025

ಮಹಿಳಾ ವಿಶ್ವಕಪ್ ಕ್ರಿಕೆಟ್ ಸ್ಪರ್ಧೆ 

ಓಡಿಸಿತು ಆಟಗಾರ್ತಿಯರ ನಿದ್ದೆ
ಛಲ ಬಿಡದ ಅಕ್ಕರೆಯ ಮದ್ದು 
ಪ್ರತಿಸ್ಪರ್ಧಿಗಳಿಗೆ ನೀಡಿತು ಗುದ್ದು

ಹೆಣ್ಣಿಗೆ ಅಸಾಧ್ಯ ಯಾವುದಿದೆ?
ಆನಂದ ಭಾಷ್ಪಕ್ಕೆ ಎಣೆಯುಂಟೆ?
ಭಾರತೀಯರ ಹೆಮ್ಮೆಯ ಭಾವ 
ನೀವಾದಿರಿ ಆದರ್ಶದ ಮುಕುಟ 

ಸೋತವರಿಗೂ ಸಾಂತ್ವನ ನೀಡಿ
ಪ್ರೀತಿಯಲಿ ಹೃದಯವನು ತೀಡಿ
ವಿಶ್ವ ಮಾನ್ಯರಾದಿರಿ ಬಾಲೆಯರೇ!
ನಲ್ಮೆಯ ಭಾರತೀಯ ಕುವರಿಯರೇ!

✍️ ಎಸ್ ಶ್ರೀಧರಮೂರ್ತಿ ಶಿವಜಯಸುತ 

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ