ನಿರೂಪಣಾ ಕವನ
ಹಿಂದೆ ಹೋಗಣ
Dec 02, 2025
ಓಡಿದರೆ ನೀ ಹೀಗೆ
ಹಿಂಬಾಲಿಸಲಿ ನಾ ಹೇಗೆ
ದಣಿದಿರುವೆ ನಾನು
ದಯೆ ತೋರು ನೀನು
ಕಾಲಚಕ್ರ ಹಿಂದಕ್ಕೆ
ನೋಡಬೇಕಿದೆ ನಾನು
ಈ ಮೊದಲು ಎಲ್ಲಿ ಹೇಗಿದ್ದೆ!
ಒಮ್ಮೆ ಕರೆದೊಯ್ಯಬಾರದೆ
ಪೂರ್ವ ಜನ್ಮಕೆ ನನ್ನನು
ಹಿಂದೆ ಮಾಡಿದ ತಪ್ಪನರಿತು
ಈ ಜನ್ಮದಲ್ಲಿ ತಿದ್ದಿ ನಡೆಯಲು...!
✍️ಆಶ್ರಿತಾ ಕಿರಣ್
ಇತ್ತೀಚಿನ ಕಾಮೆಂಟ್‌ಗಳು