ನಿರೂಪಣಾ ಕವನ
ಆರೋಗ್ಯ
Apr 07, 2026
ಆರೋಗ್ಯವೇ ಆಸ್ತಿ
ಆರೋಗ್ಯವೇ ನಮ್ಮ ನಿಜವಾದ ಧನ
ಅದು ಇದ್ದರೆ ಬದುಕು ಸುಖಮಯ ಗಗನ।
ಬಂಗಾರ ಬೆಳ್ಳಿ ಸಿಗಬಹುದು ಎಲ್ಲಿಂದಲೂ
ಆರೋಗ್ಯ ಸಿಗದು ಸುಲಭವಾಗಿ ಎಲ್ಲೆಲ್ಲೂ॥
ಬೆಳಗಿನ ನಡೆ ಮನಕೆ ಹರ್ಷ ತರುತ್ತದೆ
ಶುದ್ಧ ಗಾಳಿ ಜೀವಕ್ಕೆ ಶಕ್ತಿ ತುಂಬುತ್ತದೆ।
ಹಣ್ಣು ತರಕಾರಿ ದೇಹಕ್ಕೆ ಹಿತ
ಜಂಕ್ ಆಹಾರದಿಂದ ದೂರವಿರೋಣ ಸದಾ ಚಿತ್ತ॥
ನೀರನ್ನು ಕುಡಿಯೋಣ ಸಮಯಕ್ಕೆ ಸರಿಯಾಗಿ
ಸ್ವಚ್ಛತೆ ಪಾಲಿಸೋಣ ನಿತ್ಯವೂ ನಿಜವಾಗಿ।
ವ್ಯಾಯಾಮ ಮಾಡಿದರೆ ದೇಹವು ಬಲ
ಆರೋಗ್ಯದಿಂದ ಬದುಕು ಸುಂದರ ಫಲ॥
ನಗುವು ಔಷಧಿ ಮನದ ನೋವಿಗೆ
ಸಂತೋಷವೇ ದಾರಿ ಸುಖದ ಬದುಕಿಗೆ।
ಆರೋಗ್ಯ ಕಾಪಾಡೋಣ ಎಲ್ಲರೂ ಸೇರಿ
ಸುಖ ಜೀವನ ಸಾಗಿಸೋಣ ಹರ್ಷದಿಂದೇರಿ॥
ಲೇಖಕಿ ಗಾಯತ್ರಿ ಎಸ್ ಎನ್ ಶಿವಮೊಗ್ಗ
ಇತ್ತೀಚಿನ ಕಾಮೆಂಟ್‌ಗಳು