ಕವನಗಳು
ಕೆಂಗುಲಾಬಿ
Dec 01, 2025
ದಿನದ ಪದ
ಮೊದಲ ಬಾರಿ ಮಾತನಾಡಿಸಿದಾಗ
ಅವಳ ಮಾತುಗಳಲ್ಲಿನ ಮುಗ್ಧತೆಯು
ಅವಳ ನಿಷ್ಕಲ್ಮಶ ನಿಷ್ಕಳಂಕ ಮನಸು
ಅನಿಸಿತು ಇವಳಲ್ಲವೇ ಶ್ವೇತ ಗುಲಾಬಿ
ಕಾಲವು ಕಳೆದಂತೆ ಕ್ರಮೇಣ ಅವಳ
ಸ್ಪಂದಿಸುವ ಸ್ವಭಾವಕೆ ಮಾರುಹೋಗಿ
ಪರಿಚಯವದು ಸ್ನೇಹವಾಗಿ ಬೆಳೆಯಿತು
ಅನಿಸಿತು ಇವಳಲ್ಲವೇ ಹಳದಿ ಗುಲಾಬಿ
ಪರಸ್ಪರ ಗೌರವವು ಹೆಚ್ಚಾಗುತ್ತಿರಲು
ಹೃದಯದಲಿ ಆಯಿತು ಪ್ರೇಮಾಂಕುರ
ಬೆಂಬಲಿಸಿ ಬೆಳೆಯುತ ಜೊತೆಯಾಗಿ
ಅನಿಸಿತು ಈಗವಳು ಹಸಿರು ಗುಲಾಬಿ
ಅರಳಿತು ಅನುರಾಗದ ಅನುಬಂಧವು
ಒಂದಾಗಿ ಸಂತಸ ಸಂಭ್ರಮ ಸಡಗರವು
ಬಾಳಿನಾಗಸದಲಿ ರಂಗಿನೋಕುಳಿಯು
ಸಾರಿದೆ ಇವಳೇ ನನ್ನಯ ಕೆಂಗುಲಾಬಿ
- ಗಿರೀಶ್
ಇತ್ತೀಚಿನ ಕಾಮೆಂಟ್‌ಗಳು