ಕವನಗಳು
ಹುಳಿ ದ್ರಾಕ್ಷಿ
Apr 08, 2026
ಕೈಗೆಟುಕದ ಅವಕಾಶವೊಂದು ಮುಗುಳ್ನಗುತ್ತಿತ್ತು
ಕೈಗೆಟುಕದ ದ್ರಾಕ್ಷಿಯ ಹಾಗೆ
ಆ ಅವಕಾಶ ಎಲ್ಲರನ್ನ ತನ್ನತ್ತ ಆಕರ್ಷಿಸುತ್ತಿತ್ತು
ಫಲಭರಿತ ದ್ರಾಕ್ಷಿ ಆಕರ್ಷಿಸುವ ಹಾಗೆ.
ಆಕರ್ಷಿತಗೊಂಡ ಮಂದಿ ಆ ಅವಕಾಶ
ತನ್ನದಾಗಿಸಿಕೊಳ್ಳಲು ಪ್ರಯತ್ನಿಸುವ ಹಾಗೆ
ಆ ಹಸಿರು ಬಣ್ಣದ ಫಲಭರಿತ ದ್ರಾಕ್ಷಿಯನ್ನು
ಸವಿಯಲು ಹಲವಾರು ಮಂದಿ ಪ್ರಯತ್ನಿಸುತ್ತಿದ್ದರು.
ಹಲವಾರು ಮಂದಿ ಈ ದ್ರಾಕ್ಷಿ ತನಗೆಟುಕುವುದಿಲ್ಲ
ಇದು ಹುಳಿ ದ್ರಾಕ್ಷಿ ಎಂದರಂತೆ ಹಾಗೆ
ಹಲವಾರು ಮಂದಿ ಪ್ರಯತ್ನದಿ ಸೋತು
ಈ ಅವಕಾಶ ತನಗಲ್ಲವೆಂದುಕೊಂಡರಂತೆ.
ಪ್ರಯತ್ನ ಬಿಡದ ಓರ್ವನೊಬ್ಬ ಆ ದ್ರಾಕ್ಷಿ
ರುಚಿ ಸವಿದು ಆನಂದ ಪಟ್ಟ ಹಾಗೆ
ಪ್ರಯತ್ನ ಬಿಡದ ಓರ್ವನೊಬ್ಬ ಆ ಅವಕಾಶ
ಉಪಯೋಗಿಸಿಕೊಂಡು ಗುರಿ ತಲುಪಿದನು.
ಐಶ್ವರ್ಯ ಕೆ ಆರ್
ಇತ್ತೀಚಿನ ಕಾಮೆಂಟ್‌ಗಳು