ಕವನಗಳು
ಚಿಗುರು
Nov 04, 2025
ದಿನದ ಪದ
ಬರಡು ಭೂಮಿಯಲಿ ಬಿತ್ತಿ ಬೀಜವ
ಎನಿತು ಕಾದರೇನು ಪ್ರಯೋಜನವು
ಆಗುವ ನಿರಾಸೆಯು ಅಸಹನೀಯವು
ಹಿರಿಯರಿಗಿರಲೇಬೇಕು ಇದರ ಅರಿವು
ಅವರ ಕರುಳಕುಡಿಗೆ ಅತ್ಯಾವಶ್ಯಕವು
ಫಲವತ್ತಾದ ಭೂಮಿಯ ಪರಿಸರವು
ನಿರಂತರವಾಗಿ ಪ್ರೋತ್ಸಾಹದ ಜಲವು
ಆಗಮಾತ್ರ ನೋಡಬಹುದು ಚಿಗುರು
ಅಲ್ಲಿಗೆ ಮುಗಿಯದು ಜವಾಬ್ದಾರಿಯು
ಚಿಗುರದು ಬೆಳೆದು ಮರವಾಗಬೇಕು
ಮರವಾಗಿ ಸಿಹಿಯ ಫಲ ನೀಡಬೇಕು
ಆಗಲ್ಲವೇ ಸಾರ್ಥಕತೆಯೆಂಬ ಚಿಗುರು
- ಗಿರೀಶ್
ಇತ್ತೀಚಿನ ಕಾಮೆಂಟ್‌ಗಳು