ಕವನಗಳು
ಗ್ರಹಣ
Sep 07, 2025
ಆಕಾಶಕಾಯಕೆ ಹಿಡಿದಿದೆ ಗ್ರಹಣ
ಮಾಯೆಯಿಂದ ಮತಿಗೆ ಭ್ರಮಣ
ದೇಹಕೆ ಗಮ್ಯವೇ ಮಸಣ
ಪರಿತಪಿಸಿದೆ ಜೀವದ ಹರಣ
ಹರಡಿದೆ ಅಜ್ಞಾನದ ಕಾಡು
ಜ್ಞಾನದ ಮಿಂಚಲಿ ನೋಡು
ಹಿಡಿಯುತ ಸತ್ಯದ ಜಾಡು
ಬೆಳಗಲಿ ಆತ್ಮದ ಸೂಡು
ಭಗವಂತನಲಿ ಕೃಪೆಯನು ಕೋರು
ಸಾಧನೆಯ ಶಿಖರವ ಏರು
ಅರಿವಿನ ಜ್ಯೋತಿಯ ಬೀರು
ಶಾಂತಿಯ ಸಂದೇಶ ಸಾರು
-ಚೇತನ ಭಾರ್ಗವ
ಇತ್ತೀಚಿನ ಕಾಮೆಂಟ್‌ಗಳು