ನಿರೂಪಣಾ ಕವನ

ಪಂಚಮದಲ್ಲಿ ಹಾಡಿತು ಕೋಗಿಲೆ

Mar 03, 2026


ಪಂಚಮದಲ್ಲಿ ಹಾಡಿತು ಕೋಗಿಲೆ

ನವ ವಸಂತದ ಹೆಜ್ಜೆಯ ಸಂಭ್ರಮ 
ಹಸಿರು ಹೊನಲಿನ ಸ್ವಾಗತ ವಿಹಂಗಮ 
ಚೈತ್ರದ ಚಿಗುರೊಡೆದ ರಮ್ಯ ಸಮಾಗಮ
ಚಿಲಿಪಿಲಿ ಕಲರವದ ತನ್ಮಯತೆಯ ಸಂಗಮ 

ಪಂಚಮದಲ್ಲಿ ಹಾಡಿತು ಕೋಗಿಲೆಯ ಇಂಪನ 
ಪ್ರಸನ್ನತೆಯ ನಿಸರ್ಗದಲಿ ಚೇತನದ ಗುಣಗಾನ
ಜುಳು ಜುಳು ಹರಿಯುವ ಶರಧಿಯ ಸವಿಗಾನ
ಮೈ ನವಿರೇಳಿಸುವ ಪ್ರಕೃತಿಯ ಮಂಜುಳಗಾನ 

ಒಲವಾದ ಭಾವನೆಯಲಿ ಪ್ರೇಮಿಗಳ ಸಮ್ಮಿಲನ 
ಪ್ರೀತಿಯ ಹಾಳೆಯಲಿ ಬರೆದಿರುವ ಪ್ರೇಮಕವನ
ಚಿಗುರಿದ ಕನಸುಗಳ ನನಸಾಗುವ ಮಧುರಗಾನ
ಮನಸಿನ ಹೊತ್ತಿಗೆಯ ಬೆಳಗಿಸುವ ಅನಂತಗಾನ

ಶ್ರೀಪಾದ ಆಲಗೂಡಕರ ✍️ 
ಕಲಬುರ್ಗಿ ಪುಣೆ

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ