ನಿರೂಪಣಾ ಕವನ
ಚಳಿ
Dec 02, 2025
ಬಿಡದೆ ಕಾಡುತಿಹ ಚಳಿ
ದೇಹವನ್ನೇ ನಡುಗಿಸಿದೆ
ಸುಯ್ಯನೆ ಬೀಸುತ ತಂಗಾಳಿ
ಜಗವನ್ನೇ ಮರೆಸಿದೆ
ಏಳುವ ಮನಸೇ ಆಗದೆ
ಬೆಚ್ಚಗೆ ಮಲಗಿಸುತ
ಮುದ್ದೆ ಮಾಡುತ ಮೆಲ್ಲಗೆ
ಕಾಡಿದೆ ಸಂಜೆ ಮರೆಸುತ
ಚಳಿಯೇ ಬಿಡು ನಿನ್ನ ಚಾಳಿ
ನೀನಿರಲು ಕಾರ್ಯವು ಸ್ಥಗಿತ
ನಿದ್ದೆಯ ಮಂಪರು ಹಿಡಿಸಿ
ಆಲಸ್ಯತನ ಬಿತ್ತುವೆ ಕುಗ್ಗಿಸುತ
ಮೈ ಕೈಗಳನ್ನು ಬೆಂಕಿಗೆ ತಾಗಿಸುತ
ಚಳಿಯಿಂದ ರಕ್ಷಿಸಿಕೊಳ್ಳುತ
ಪರಿಸರವೆಲ್ಲ ಶೀತದಿ ಬೆರಗಾಗುತ
ಆರೋಗ್ಯಕ್ಕೆ ಸವಾಲೆಸೆವುದು ಕಾಡುತ
ಅವಿನಾಶ ಸೆರೆಮನಿ
ಬೈಲಹೊಂಗಲ
ಇತ್ತೀಚಿನ ಕಾಮೆಂಟ್‌ಗಳು