ನಿರೂಪಣಾ ಕವನ
ಕನಸುಗಳೆಂಬ ಬಣ್ಣದ ಲೋಕ
Mar 04, 2026
ಮನದಂಗಳದಲಿ
ಬಣ್ಣ ಬಣ್ಣದ ಆಸೆ ಕನಸುಗಳ
ಹೊತ್ತ ಈ ಮನದಂಗಳ
ಚಿತ್ತಾರ ಮೂಡಿಸುತೈತೆ ಬದುಕಿನಲಿ
ಉತ್ಸಾಹವ ಚಿಮ್ಮಿಸುತೈತೆ ಹರುಷದಲಿ
ಕಂಡಂತ ಕನಸುಗಳೆಲ್ಲಾ ನನಸಾಗಲಿ
ಎಂದು ಅನುಕ್ಷಣವು ಬಯಸುತೈತೆ
ಈ ಮನದಂಗಳದ ನಡುವಿನಲಿ
ನಿಂತ ಹೃದಯ ಹೀಗೆ ಹಾರೈಸುತಲಿ...!!
ಹೊಸದಾದ ಭಾವಗಳ ಚಿತ್ರಪಟದಲಿ
ಬಣ್ಣದ ಕನಸುಗಳು ವಿಸ್ತಾರದಲಿ
ಕಲಾವಿದನಾಗಿ ಕಳೆಕಟ್ಟುವ ಕನಸುಗಳ
ಈ ಬಣ್ಣದ ಲೋಕದಲಿ
ಎಂದೆಂದೂ ನಿರೀಕ್ಷೆಯ ಬಣ್ಣದ ಕಾರಂಜಿಯೇ ಹೊಮ್ಮುತಿರುವುದು ಭರವಸೆಯಲಿ !!
ಬಣ್ಣದ ಕುಂಚಹಿಡಿದ
ಆಲೋಚನೆಯೆಂಬ ಕಲಾವಿದನ ಪ್ರತಿಯೊಂದು ಚಿತ್ರವು
ರಾಗರಂಜಿತವು...!!
ಮನಸೆಂಬ ಬಣ್ಣದ ಲೋಕದ ಹೃದಯಂಗಳದಲಿ
ಕನಸುಗಳೆಂಬ ಹೂವುಗಳ ಮೇಲೆ
ನನಸೆಂಬ ಪತಂಗವು ಹಾರಾಡುತಲಿರಲಿ..!!
-ಆ.ಶೆ
ಇತ್ತೀಚಿನ ಕಾಮೆಂಟ್‌ಗಳು