ನಿರೂಪಣಾ ಕವನ

ಆತ್ಮ ಸಂಗಾತಿ

Mar 02, 2026

ಒಲವಿನ ಕರೆಯಲಿ ಪ್ರೀತಿಯು ಬೆರೆತು

ಮಧುರತೆಯ ನುಡಿಗೆ ಹೃದಯ ತಲ್ಲಣ

ಆತ್ಮಸಂಗಾತಿ ಜೊತೆಗೆ ಕನಸು ಶುರುವಾಗಿ

ಪ್ರೇಮದೊಡನಾಟಕೆ ಬೇಕಿಲ್ಲ ಬೇರೆ ಕಾರಣ!


ಹೊಸತು ಭಾವ ಪಲ್ಲವಿಸಿ ಮನದಲಿ

ಬಾಳಲಿ ಚೆಲ್ಲಿದೆ ಬೆಳದಿಂಗಳ ಬೆಳಕು 

ಕೇಳಲರಿಯದ ಹಿತದ ಅನುಭೂತಿಗೆ

ಸಂಭ್ರಮ ತಳೆದು ಬಣ್ಣವಾಗಿದೆ ಬದುಕು


ಎದೆಯ ಬಯಲಿಗೆ ಒಲವ ಮಳೆ ಹರಿಸಿ

ಪ್ರೀತಿಯ ಬೆಳೆಗೆ ಬಾಳಾಗಿದೆ ಹಸಿರು 

ಕಂಗಳ ಕಾಂತಿಯು ಮನವನು ಆವರಿಸಿ

ಮೆಲ್ಲನೆ ಅನುರಣಿಸುತಿದೆ ನಿನ್ನದೇ ಹೆಸರು


✒️ಆಶಾ ಅಡೂರ್

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ