ನಿರೂಪಣಾ ಕವನ

ದಡಗಳೆರೆಡು ಹೋಳಾಗಿ

Feb 04, 2026
star 5.0  (22 ಓದು) share ಹಂಚಿಕೊಳ್ಳಿ

ದಡಗಳೆರೆಡು ಹೋಳಾಗಿ
ಬಡಿಬಡಿಸುವ ಬರುಡಿಯಾಗಿ
ನಿಂತವಳೇ ನೀಲಗಣ್ಣಿನ ನೀಲಾಂಬರಿ
ಒಂದಗಣ್ಣು ಚಂದ್ರನಾಗಿ
ಮತ್ತೊಂದು ತುಂಡಾಗಿ
ಬಿಕ್ಕವಳೇ ಬೆಳದಿಂಗಳ ಕನಕಾಂಬರಿ..

ಎಷ್ಟೊಂದು ಮೊಗ್ಗೆಲ್ಲಾ  ಕಾಸು ಕೊಟ್ಟರೂ
ಅರಳಲ್ಲ.. ಎಲ್ಲಿಂದ ಕದ್ದು ತಂದ್ಲೋ ನಗುವನ್ನ..
 ಚಾಚಿಣಿಕಿ ತಲೆಗೂದಲ ಚಾಚಿದರೂ ನಯವಿಲ್ಲಾ
ಎಷ್ಟಂತ ಜೋಡಿಸಬೇಕು ನಕ್ಷತ್ರಗಳನ್ನ..
ಲಂಗದ ಮ್ಯಾಲಾ ನೀಲು ಗರಿಯ ಸೆರಗ
ಸೆರಗಲ್ಲ ಮೋಡದ ಹಂದರ..
ನವಿಲಿನ ಗರಿ ಬಿಡಿಸಿ ಹಾಕ್ಯಾರೋ ಮಿನುಗ
ಮಿಂಚುಳ್ಳಿ ಮೋಹಕ ಬೆದರ..

ತಲೆಬಾಗಿಲಕೆ ಒರಗಿ ನಿಂತರ ತುಸು ತಂಗಾಳಿ
ಎದುರು ಬಂದು ಹೇಳಿದಂಗೆ   ಊರಿನ ಸಮಾಚಾರ
ಊಸರವಳ್ಳಿ ಜಾತಿಯವಳಿಗೆ ದೇವರಿಟ್ಟ ಚೆಂದವ
ಸಾಲುತ್ತಿಲ್ಲಾ ಯಾಕೆ ಅಂದ ಚಂದದ ಆಡಂಬರ
ಇವಳಿದ್ರೇ ಮಳೆಯಂತೆ.. ನಕ್ಕಿದರೆ ಬೆಳೆಯಂತೆ
ವರ ಕೊಟ್ಟಂಗೆ ಮಾಡ್ಯಾಳೋ ಮಾಯ
ಊರಿಗಿಲ್ಲದ ಸೊಬಗ ಕಿರುಬೆರಳಲ್ಲೇ ಆಡಿಸಿ
ಹುಂಬ ಆಸೆಗಳ ವಶ ಮಾಡಿಕೊಂಡಾಳೋ ಛಾಯ..

 ರಾಘವೇಂದ್ರ. ಕೆ


ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ