ಕವನಗಳು
ಬದುಕು ಸೋಜಿಗ
Apr 08, 2026
ನಕಲಿ ನಗುವಿನಲ್ಲಿ, ಅಸಲಿ ನೋವಿನ
ಮರೆಯಲ್ಲಿ, ಪ್ಲಾಸ್ಟಿಕ್ ಪಕುಳೆಯಂತೆ ಬೆಳಗುವ
ಮೊರೆಯಲ್ಲಿ, ಯಾವ ಚೈತನ್ಯ ಹುಡುಕುವೇ.
ಕನ್ನಡಿಯು ಕಳಚದ ವೇಷವಿದು
ಬಾಡಿಗೆದಾರನ ಜೀವನವು,
ಇಲ್ಲಿ,
ಕನಸಿಗೂ ದಂಡ ಕಟ್ಟಬೇಕಿದೆ,
ಆಸೆಗೂ ಸೀಮೆಯ ಹದ್ದಿದೆ,
ಕೊರೆತೆ ಉಂಟು, ಪ್ರೀತಿಗೂ ಇಲ್ಲಿ,
ಚೂರು ನೆಮ್ಮದಿಯು ಸಾಲಕ್ಕೆ ಕೊಡಬಾರದೇ,
ಬದುಕು ಬಲು ಸೋಜಿಗ, ತಿಳಿದಷ್ಟು ಕ್ಲಿಷ್ಠ ಕಾಳಗ,
ಬರಹ
adita
ಇತ್ತೀಚಿನ ಕಾಮೆಂಟ್‌ಗಳು