ನಿರೂಪಣಾ ಕವನ

ಯಶೋದೆಯ ಹುಸಿಕೋಪ

Oct 03, 2025

ಚಿತ್ರ ಮಿತ್ರ ಅವರ ಸುಂದರ ಚಿತ್ರಕ್ಕೆ ನನ್ನ ಕವನ

“ಯಶೋದೆಯ ಹುಸಿಕೋಪ”


ತುಂಟ ಮಕ್ಕಳ ಸೇರಿಸಿಕೊಂಡು 

ತಂಟೆ ಏತಕೆ ಮಾಡುವೆ ಕಂದಾ

ಗಂಟೆ ಗಟ್ಟಲೆ ಹಾಗೇ ಕುಳಿತಿರು

ಗಂಟು ಕಟ್ಟಿದ ಹಗ್ಗ ಬಿಚ್ಚಲಾರೆನು


ಅಳುವ ಶುಂಡಿ ಮಾಡಬೇಡವೋ

ಅಳಲು ಏನೆಂದು ನನಗೆ ಗೊತ್ತು

ಕರಗಲಾರೆ ಇಂದು ಮುದ್ದು ಮೊಗಕೆ 

ಕರುಣೆ ಬಾರದು ಎನ್ನಯ ಮನದಿ


ಬೆಣ್ಣೆ ತಿಂದು ಮಡಕೆಯ ಒಡೆದು

ಅಣ್ಣನ ಕಡೆ ಕೈಯ ತೋರಬೇಡ

ಕೆಟ್ಟ ಕೋಪ ಬಂದಿದೆ ಎನಗಿಂದು 

ಪುಟ್ಟ ಶ್ಯಾಮ  ತಪ್ಪಿಂದು ನಿನ್ನದೇ


ಮತ್ತೆ ತಪ್ಪು ಮಾಡೋಲ್ಲವೆಂದು

ಮತ್ತದೆ ಸುಳ್ಳು ನುಡಿಯಬೇಡ 

ನಂಬಲಾರೆ ನಿನ್ನ ಬೆಣ್ಣೆಯ ಮಾತ

ಹಂಬಲಿಸದಿರು ಕಟ್ಟ ಬಿಚ್ಚುವೆನೆಂದು // 


ಸವಿತಾ ರಮೇಶ 

 




ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ