ನಿರೂಪಣಾ ಕವನ

ಬಣ್ಣದ ಲೋಕ

Mar 04, 2026

ಬಣ್ಣದ ಲೋಕ 

ಮನದಲ್ಲಿ ಹುದುಗಿದ ನೋವ ತಡೆಯುವರು
ನಗುವಿರುವ ಬಣ್ಣದ ಲೋಕದಲಿ ವಿಹರಿಸುವರು
ಮೊಗದಲಿ ಮುಗುಳುನಗೆ ಬೀರುತ ನಡೆಯುವರು
ಇನ್ನೊಬ್ಬರ ಕಣ್ಣೀರನೂ ಒರೆಸುತ್ತಾ ನಗಿಸುವರು

ರಂಗಿನಲಿ ತಂಗುತಾ ಹೊರ ಜಗವ ನೋಡಿಹರು 
ಕೆಡುಕು ಒಳಿತುಗಳ ಏರಿಳಿತಗಳು ಅರಿತಿಹರು
ಮೌನದ ಮನದಲ್ಲಿ ಭಾವನೆಗಳ ತುಂಬಿಹರು
ಏಕಾಂತದಲಿ ಶರಣಾಗಿ ಕಣ್ಣೀರು ಹರಿಸುವರು

ಅಹಂಕಾರ ದುರ್ನಡತೆಗಳ ಎದುರಿಸಿ ನಡೆದಿಹರು
ನೆಮ್ಮದಿಯ ಬದುಕಿಗೆ ಜೀವನ ಪಣತೊಟ್ಟಿಹರು
ಸಂವೇದನೆ ಶಾಂತಿ ತಾಳ್ಮೆಯ ವಾರಸುದಾರರು
ಮೋಸ ವಂಚನೆಯ ಬಣ್ಣದ ಲೋಕ ಅರಿತಿರುವರು

ಶ್ರೀಪಾದ ಆಲಗೂಡಕರ ✍️ 
ಕಲಬುರ್ಗಿ ಪುಣೆ 


ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ