ಕವನಗಳು
ಶಾಲೆ ದಿನಗಳ ಸವಿನೆನಪು..
Jul 04, 2025

ಹಳೆಯ ದಿನಗಳ ಮರೆಯುವುದು ಕಷ್ಟ.
ಆ ದಿನಗಳೇ ನನಗೆ ತುಂಬಾ ಇಷ್ಟ.
ಅಳುತ್ತಿದ್ದೆ ಶಾಲೆಗೆ ಹೋಗಲು ಅಂದು.
ಆ ದಿನಗಳ ನೆನೆದು ಭಾವುಕನಾಗಿರುವೆ ಇಂದು.
ಶಾಲೆಯೆಂದರೆ ಭಯವೆನಿಸುತ್ತಿತ್ತು ಅವತ್ತು.
ಅದೇ ಶಾಲೆಗೆ ಹೋಗಲು ಹಂಬಲಿಸುತ್ತಿರುವೆ ಇವತ್ತು.
ಗುರುಗಳು ಪೋಷಕರಿಗೆ ಮಾಡಿದ ದೂರು.
ಅದನ್ನು ನೆನೆದರೆ ತುಸು ಬೇಜಾರು.
ದಿನಾ ಹಾಕಬೇಕಿತ್ತು ಅದೇ ಸಮವಸ್ತ್ರ
ಬುಧವಾರ ಮಾತ್ರ ಬಣ್ಣಬಣ್ಣದ ವಸ್ತ್ರ.
ಆಡುತ್ತಿದ್ದೆವು ಅಂದು ಗೆಳೆಯರೊಂದಿಗೆ ಜಗಳ.
ಆದರೆ ವಿಷಯ ಮಾತ್ರ ಅತೀ ಸರಳ.
ಮಧ್ಯಾನದ ಅವಧಿಯಲ್ಲಿ ಹಂಚಿಕೊಳ್ಳುತ್ತಿದ್ದೆವು ಊಟ.
ಅದನ್ನು ನೆನೆದರೆ ಇಂದು ನನಗೆ ಸಂಕಟ.
ಸುಮಾರು ವರುಷಗಳೇ ಕಳೆದರು.
ಯಾವುದನ್ನು ಮರೆತಿಲ್ಲ ಯಾರು.
ನನ್ನ ಗೆಳೆಯರ ಬಳಗ ಮಾಡಿದರೆ ಕರೆ.
ಅದರಿಂದ ಆಗುವ ಖುಷಿಯೇ ಬೇರೆ.
ಅರಿಯದ ವಯಸ್ಸಲ್ಲಿ ಹರಿದುಹೋದ ದಿನಗಳವು.
ನಾ ಕಳೆದ ಅಪರೂಪದ ಸುವರ್ಣ ಕ್ಷಣಗಳವು.
ಅಂದು ಗುರುಗಳು ಬಿತ್ತಿದ ಮಂತ್ರ.
ಇಂದು ನಾ ಕಂಡ ಕನಸಿಗೆ ಸೂತ್ರ.
ಕಲಿಸಿದ ಗುರುಗಳಿಗೆ ಋಣಿಯಾಗಿರೋಣ
ಕಲಿತ ಶಾಲೆಯ ಮರೆಯದಿರೋಣ...
ಅಭಿಷೇಕ್ ಹೆಚ್ ಜೆ
ಇತ್ತೀಚಿನ ಕಾಮೆಂಟ್‌ಗಳು