ನಿರೂಪಣಾ ಕವನ

ಶರಣೆನ್ನುವೆ ಮಾತೆ

Feb 03, 2026
star 1.0  (51 ಓದು) share ಹಂಚಿಕೊಳ್ಳಿ

ದಯೆ ತೋರಿ ಕಾಪಾಡು

ವರಲಕುಮಿ ಮಾತೆ... ಸಿದ್ದಿ ಪ್ರದಾತೆ

ಭರವಸೆಯ ಬೆಳಕನ್ನು ತೋರಮ್ಮ /

ಪೊರೆಯುತ್ತ ಜಗವನ್ನು ನಿನ್ನಿಚ್ಛೆಯಂತೆ 

ಭವಭಯವ ತೊರೆದು ಮುನ್ನಡೆಸಮ್ಮ //


ನೀಡುತಲಿ ವರವನ್ನು ಸೌಖ್ಯದಾತೆ

ಕಾಡುತಿಹ ದುಃಖಗಳ ಅಳಿಸಮ್ಮ /

ಬೇಡುವವರನು ದಯೆ ತೋರಿ ಕಾಪಾಡಿ 

ಹಾಡುವ ರಾಗದಲಿ ನಿಂದು ನೆಲೆಸಮ್ಮ//


ಸಿದ್ಧಿಯ ನೀಡಿ ಕರ್ಮ ಕಳೆವ ಜಗನ್ಮಾತೆ

ಬದ್ಧ ನಡೆಯನು ಮೆಚ್ಚಿ ಹರಸಮ್ಮ /

ಶುದ್ಧ ಬದುಕಿಗೆ ಮಹಿಮೆ ತೋರುತ 

ಬುದ್ಧಿ ಕಲಿಸಿ ಜ್ಞಾನ ಚಕ್ಷು ತೆರೆಸಮ್ಮ//


ಕರುಣೆಯ ಸಿಂಧು ಭಾಗ್ಯವಿಧಾತೆ 

ತರತರದ ಬವಣೆಗಳ ಪರಿಹರಿಸಮ್ಮ/

ಶರಣಾಗಿ ಅಡಿಗೆರಗುವೆ ನಿತ್ಯವು  

ಭರಪೂರ ನೆಮ್ಮದಿಯ ಕರುಣಿಸಮ್ಮ //


✒️ಆಶಾ ಅಡೂರ್

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ