ಚಳಿ
ಸಣ್ಣ ಕಥೆ
ಚುಮು ಚುಮು ಚಳಿಯಲಿ
ಮಂಜಿನ ಮುಸುಕಲಿ
ಕಾಫಿಯ ಹೀರುತ
ಬಜ್ಜಿಯ ತಿನ್ನುತ
ನೆನೆಯುವೆ ನಾ ನಲ್ಲೆ
ನೆನೆಯುವೆ ನಾ ನಲ್ಲೆ ನಿನ್ನ .........
ಹೀಗೆ ಮನಸಿಗೆ ಬಂದ ಹಾಡುಗುನುಗುತ್ತಿದ್ದವನ
'ನಿಶಾಂತ್ ' ' ನಿಶಾಂತ್' ವಾಕಿಂಗ್ ಹೊರಟೆಯ ಮಗನೆ
ತಾಯಿಯ ಕೂಗು ಎಚ್ಚರಿಸಿತು. ಇಲ್ಲಮ್ಮ ಈಗ ಹೊರಟೆ ಎಂದು ರೂಮಿಂದ ಹೊರ ಬಂದ. ಇಷ್ಟು ಬೇಗ ಈ ಚಳಿಯಲ್ಲಿ ವಾಕಿಂಗ್ ಹೋಗುವುದು ಕಷ್ಟ ಆದರೂ ಅಮ್ಮ ಬಿಟ್ತಾಯಿಲ್ಲ. ಹೋಗಲೆ ಬೇಕು ಎಂದು ತಾಯಿಗೆ ಬಾಯ್ ಮಾಡಿ ವಾಕಿಂಗ್ ಹೊರಟ .
ಆತನಿಗೆ ಒಂದು ಅಭ್ಯಾಸವಿತ್ತು ವಾಕಿಂಗ್ ಇಂದ ಬರುವಾಗ ಕಾಫಿ ಕುಡಿಯುವುದು. ನಿಶಾಂತ್ ಒಂದು ದಿನ ಕಾಫಿ ಕುಡಿಯುತ್ತಿರುವಾಗ ವೃದ್ಧರೊಬ್ಬರು ಆತನ ಪಕ್ಕದಲ್ಲಿಯೆ ಕಾಫಿ ತೆಗೆದುಕೊಂಡು ಅಂಗಡಿಯವನಿಗೆ ಹಣ ನೀಡಲು ಹುಡುಕಾಡಿದರು .ಆದರೆ ಹಣವಿಲ್ಲ. ಅಂಗಡಿಯಾತನಿಗೆ ಹೇಳಿದರು ಅದಿಕ್ಕೆ ಅಂಗಡಿಯಾತ ಹಣ ಇಲ್ಲದವರು ಯಾಕ್ ಬರುತ್ತಾರೊ ಬೆಳಿಗ್ಗೆ ...ಬೆಳಿಗ್ಗೆ ತಲೆ ನೋವು ಗಿರಾಕಿಗಳು ಎಂದು ಗೊಣಗಿದ . 'ಇಲ್ಲಪ್ಪ ಹಣ ಇತ್ತು ನನ್ನ ಕೈ ತಪ್ಪಿ ಎಲ್ಲೋ ಬಿದ್ದಿದೆ ನಾಳೆ ತಂದುಕೊಡುತ್ತೇನೆ ಎಂದರು ವೃದ್ಧರು'.
ಇಲ್ಲ ಇಲ್ಲ ಹಣ ಪಾವತಿಸಲೇ ಬೇಕು ಎಂದ ಅಂಗಡಿಯಾತ.
ಇದನ್ನು ಗಮನಿಸಿದ ನಿಶಾಂತ್ ತನ್ನ ಕಾಫಿಯ ಹಣದ ಜೊತೆ ವೃದ್ಧರ ಹಣವನ್ನು ಪಾವತಿಸಿದ . ತಾತ ಕಾಫಿ ಕುಡಿಯಿರಿ .ದಿನಾಲೂ ನಾನೊಬ್ಬನೆ ಕಾಫಿ ಕುಡಿಯುತ್ತಿದ್ದೆ ಇಂದು ಈ ಚಳಿಯಲ್ಲಿ ಬಿಸಿ ಬಿಸಿ ಕಾಫಿಯ ಜೊತೆ ನನ್ನೊಂದಿಗೆ ನೀವಿದ್ದಿರಿ ಎಂದು ನಕ್ಕನು ನಿಶಾಂತ್. ವೃದ್ಧರು ಧನ್ಯತಾಭಾವದಿಂದ ಆತನನ್ನು ನೋಡಿದರು.
ಸುವರ್ಣಾ ಭಟ್ಟ