ಜೀವನ ಪಾಠಗಳು
ಹುಳಿ ದ್ರಾಕ್ಷಿ
Apr 08, 2026
ಹುಳಿ ದ್ರಾಕ್ಷಿ
ಹುಳಿ ದ್ರಾಕ್ಷಿ ಅಂದ ತಕ್ಷಣ ಎಲ್ಲರಿಗೂ ನೆನಪಾಗೋದು ನರಿ ಮತ್ತು ದ್ರಾಕ್ಷಿ ಕಥೆ ...
ಈ ಕಥೆಯಂತೂ ಅದೆಷ್ಟು ಸಲ ಕೇಳಿದ್ದೆವು ಗೊತ್ತಿಲ್ಲ
ಒಂದು ನರಿ ದ್ರಾಕ್ಷಿ ತೋಟದ ಹತ್ತಿರ ಬಂದು ದ್ರಾಕ್ಷಿಯನ್ನು ಜಿಗಿದು ತಿನ್ನಲು ಪ್ರಯತ್ನಿಸುತ್ತದೆ. ಆದರೆ ಆ ದ್ರಾಕ್ಷಿ ಕೈಗೆಟಕುವುದಿಲ್ಲ. ಅದಕ್ಕೆ ಬೇಸರಗೊಂಡ ನರಿ ...ಇದನ್ನು ತಿನ್ನದೆ ಇದ್ದುದೆ ಒಳ್ಳೆಯದಾಯಿತು. ತಿಂದಿದ್ದರೆ ನನ್ನ ಗಂಟಲು ಹಲಗುತ್ತಿತ್ತು ಏಕೆಂದರೆ ಇವು ಹುಳಿ ದ್ರಾಕ್ಷಿ. ನನಗೆ ಸಿಗದೆ ಇದ್ದುದೇ ಒಳ್ಳೇದಾಯ್ತು ಎಂದು ಅಲ್ಲಿಂದ ಫಲಯನ ಮಾಡುತ್ತದೆ.
ಓಹ್! ಫಲಾಯನ ಅಂದ ತಕ್ಷಣ ನೆನಪಾಯ್ತು ಮನೋವಿಜ್ಞಾನದಲ್ಲಿ ಮಾನವನು ತನ್ನನ್ನು ತಾನು ರಕ್ಷಿಸಿಕೊಳ್ಳಲು ಹಲವಾರು ರಕ್ಷಣಾ ತಂತ್ರಗಳನ್ನು ಬಳಸುತ್ತಾನೆ..
ಅದರಲ್ಲಿ ಅತಿ ಮುಖ್ಯವಾದುದು ಎಂದರೆ ಫಲಾಯಾನ ತಂತ್ರಗಳಲ್ಲಿನ ತರ್ಕ ಸಮ್ಮತವಾಗಿಸುವಿಕೆ.
ಹಾಗೆಂದರೆ ತನ್ನಿಂದ ಮಾಡಲೂ ಅಸಾಧ್ಯವಾದ ಕೆಲಸ ಇನ್ನೊಬ್ಬರಿಂದಲೂ ಸಾದ್ಯವಿಲ್ಲ ಎಂಬುದನ್ನ ಸಮರ್ಥಿಸಿಕೊಳ್ಳುವುದು.
ಇದರಲ್ಲಿ ಎರಡು ರೀತಿಯ ತಂತ್ರಗಳಿವೆ, ಅದರಲ್ಲಿ ಹುಳಿದ್ರಾಕ್ಷಿ
ಅಂದರೆ - ತಾನು ಪರೀಕ್ಷೆಯಲ್ಲಿ ಸರಿಯಾಗಿ ಬರಿಯದೆ ಕಡಿಮೆ ಅಂಕ ಪಡೆದ ವಿದ್ಯಾರ್ಥಿ ಎಲ್ಲಾ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದಿದ್ದಾರೆ ಎಂದು ಸಮರ್ಥಿಸಿಕೊಳ್ಳುವುದು.
ಏನೇ ಹೇಳಿ ಹುಳಿ ದ್ರಾಕ್ಷಿ ಕಥೆನ ಜೀವನದಲ್ಲಿ ಮರೆಯೋ ಹಾಗೆ ಇಲ್ಲಾ ಅಲ್ವಾ...
ಇತ್ತೀಚಿನ ಕಾಮೆಂಟ್‌ಗಳು