ನಿರೂಪಣಾ ಕವನ

ಇಂಚರ

Jan 09, 2026

ಭೋರ್ಗರೆವ ಭಾವದೊಲವ ಶರಧಿ ನೀನು
ಹೃನ್ಮನಸಂಗಮಕೆ ಕಾದ ನಿರ್ಝರಿಣಿ ನಾನು/

ಮಿಡಿವೆನು ಮೊರೆವ ಕಡಲ ಪ್ರೇಮದ ಕರೆಗೆ
ನಿನ್ನ ಸೇರುವ ಮಧುರ ಮೈತ್ರಿಯ ಒಸಗೆಗೆ/

ಭಾವಬೆಸುಗೆಯ ಜೀವರಾಗವಾಗಿ ಬಂದೆ
ಬರಡುಮನದಿ ಸವಿ ಒಲವಿನೊರತೆ ತಂದೆ/

ನಿನ್ನುಸಿರ ಸ್ಪರ್ಶಕೆ ಹೃದಯ ಕೊಳಲಾಗಿದೆ
ಮಾರ್ದನಿಯಲಿ ನಿನ್ನ ಹೆಸರನೆ ಉಲಿದಿದೆ/

ನಿನ್ನೊಲುಮೆಯ ಪಲ್ಲವದಲಿ ಚೈತ್ರದ ಇಂಚರ
ಹೃದಯಂಗಳದಿ ಮನಮಿಡಿವ ಝೇಂಕಾರ/

ಸಾಗರಸುಧೆಯ ಮಧುರಮೈತ್ರಿ ದಾಂಪತ್ಯ
ಆತ್ಮದಲಿ ಅನುರಣಿಸಲಿ ನಮ್ಮೀ ಸಾಂಗತ್ಯ/

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ