ಕವನಗಳು

ದಯೆ ತೋರಿ ಕಾಪಾಡು

Feb 03, 2026

ದಿನದ ಪದ

ಪ್ರಾರ್ಥಿಸುವೆನು ದೇವನೆ
ನನ್ನ ಭಕ್ತಿಯ ನೀ ಮಾಡದಿರು ತುಲನೆ
ನೀನಿಟ್ಟ ಜೀವವಿದು
ನಿನ್ನನ್ನೇ ಸದಾ ಧ್ಯಾನಿಸುವುದು

ನಾ ಮಾಡಿದ ಪಾಪಗಳಿಗೆ ಪರಿತಪಿಸಿರುವೆ
 ನಿನ್ನ ಅನುಗ್ರಹಕ್ಕೆoದು ನಾ ಕಾದಿರುವೆ
ನೀ ಹರಸುವೆಯೆoಬ ಅಚಲ ನಂಬಿಕೆ
ಸಕಲ ಜೀವಿಗಳ ಮೇಲೆ ಕೃಪೆ ತೋರು ಎಂಬುದೇನ್ನಾ ಕೋರಿಕೆ

ಅಗೋಚರ ರೂಪದ ಶಕ್ತಿ ನೀನು
ನಿನ್ನ ಪಾದದಡಿಯ ದೂಳು ನಾನು
ಪ್ರಾರ್ಥನೆಯೊಂದೆ ನಿನ್ನ ತಲುಪುವ ಮಾರ್ಗವಿಲ್ಲಿ
ಸತ್ಯ ಮತ್ತು ಪ್ರಮಾಣಿಕತೆಯಲಿ ಸಾಗುತ ಸನ್ಮಾರ್ಗದಲ್ಲಿ

ನಿನ್ನ ಜಪಿಸುತಲಿರುವುದೇ ನನ್ನ ಪಾಡು
ನೀ ಕಷ್ಟಗಳಿಂದೆನ್ನಾ ದಯೆ ತೋರಿ ಕಾಪಾಡು
ಹುಲುಮಾನವರೆಂದು ಕಡೆಗಣಿಸದಿರು
ತಪ್ಪುಗಳ ಮನ್ನಿಸಿ ಸಮಸ್ಯೆಗಳ ಜಂಜಾಟದಿಂದ ಮಾಡು ಪಾರು

                        ನಾಗರತಿ ಚಿಂತಾಮಣಿ



ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ