ಕವನಗಳು
ಇಷ್ಟು ಕಾಲ ಎನ್ನದೆ ಹಾಡು
Nov 04, 2025
ಇಷ್ಟು ಕಾಲ ಎನ್ನದೆ ಹಾಡೂ ನನ್ನ ಎದೆಯೊಳಗೆ
ಎಷ್ಟು ಹಾಡಿದರೇನೂ ಭಾವ ಬೇರೆಯಾಗಿದೆ
ಹಗಲು ಇರಳುಗಳ ಮರೆತು ಮನಸು
ಜನುಮದಲ್ಲಿ ನಿನ್ನೊಂದಿಗೆ ಬೆರೆಯಬೇಕಿದೆ
ಕಾಣೋ ನಿನ್ನ ನೆರಳ ನಂಬಿ ನಾಳೆಗಳ
ಚಿತ್ರಿಸಿರುವೆ.., ಬಣ್ಣವ ಹಾಕಲೇನೂ ಹೇಳೂ
ನಿನ್ನ ನೆರಳೆ ಮಾಯಾವಾದರೆ.
ಎಲ್ಲ ಗಾನಕೂ ಕೊನೆ ಸಾಲು ಅಂತಾ
ಒಂದಿದೆ..., ಹೇಗೆ ಬಚ್ಚಿಡಲಿ ಹೇಳೂ ನಿನಗೆ
ಆ ಸಾಲು ಸಿಗದೆ ಹಾಡು ನಿಲ್ಲದಂತೆ.
ವಿರಹ ಬೇರೆ..., ಬರಹ ಬೇರೆ
ಎರಡೂ ಮೋಹಿಸಿದರೆ ನೀನೆ ಆಗುವುದಿಲ್ಲವೇ..?
ಕನಸ ಮುಗಿದು ಕದವ ತೆರೆಯೋ ಮುನ್ನ
ಮಲಗಲಿ ಹೇಗೆ..? ಹೇಳೂ ನಿನ್ನ ಹೆಸರ
ಉಚ್ಚರಿಸಿ.. ಬೀಳೋ ಎಲ್ಲ ಕನಸು ನಿನ್ನವೆಯಾದರೆ.
ತೊರೆದು ಹೋದ ದಾರಿ ಮತ್ತೇ ತಿರುವಾಗಿ
ನಿಲ್ಲುವಾಗ.. ನಡೆಯಲಿ ಹೇಗೆ ಹೇಳು ಮತ್ತೇ
ನೀ ದೊರೆತು ನಿನ್ನ ನೋಡಬೇಕೆನಿಸಿದರೇ.
ಬದುಕು ಬೇರೆ.. ಭಾವವೇ ಬೇರೆ
ಎರಡೂ ದೂರ ಇಟ್ಟು ನೋಡಿದರೆ ನೀನೆಯಲ್ಲವೇ..?
ರಾಘವೇಂದ್ರ. ಕೆ
ಇತ್ತೀಚಿನ ಕಾಮೆಂಟ್‌ಗಳು