ನಿರೂಪಣಾ ಕವನ

ಆತ್ಮ ಸಂಗಾತಿ

Mar 02, 2026

ಕಾರಣಗಳು ದೂರ ಇಡು
ಸಕಾಲಕೆ ಒದಗುತಿರು 
ವಿನಾಕಾರಣ ದೂರದೇ
ಸಮಜಾಯಿಷಿ ನೀಡದೇ
ದೊರಕಿಬಿಡು... ಆತ್ಮದೊಳಗೆ
ಆತ್ಮ ಸಂಗಾತಿಯಾಗಿರು.

ಮನಸಿನೊಳಗೆ ಕನ್ನಡಿಯೊಂದು ಜೀವಂತವಿದೆ
ಅದರ ತುಂಬ ನಿನ್ನ ಬಿಂಬವಿದೆ 
ಅಂದ ಚೆಂದಗಳ ತಕ್ಕಡಿಯೂ
ತೂಗಲು ಮನಸ್ಸೇ ಬಾರದೂ..
ಕಾಯುವ ಕಣ್ಣೊಳಗೆ ಕೇವಲ
ನಿನ್ನದೇ ಹೆಸರು ಇದೆ..
ಬೇರೇ ಎಲ್ಲ ಹೆಸರಗಳ ಮರೆತು
ನಿನ್ನ ನೆನೆವ ಹಾಗೆ ಆಗಿದೆ..
ಈ ಅನುಕೂಲ.., ಈ ಅಭಿಪ್ರಾಯ
ಕೇವಲ ನಿನಗೆ.., ನಿನಗೆ.., ನಿನಗೆ

ಉಣಬಡಿಸುವ ನಾಲ್ಕಾರು ಖಾದ್ಯಗಳ
ನಡುವೆ ನಿನ್ನ ನೆನಪೆ ಮನಸಿಗೆ
ಹಿತಕರವೂ.. ಕೇಳುವ ನೂರಾರು
ಸ್ವರಗಳ ನಡುವೆ ನಿನ್ನ ಮಾತುಗಳೇ
ಕೇಳುವ ಸುಖಕರವೂ..
ಜಾರುವ ಸಮಯಕೆ ನಿನ್ನೊಂದಿಗೆ ಇದೆ ಹಿಡಿತ
ಕಾಯುವ ಸಂಜೆಗೆ ಮನಸೊಳಗೆ ಮುದಿತನ ಖಂಡಿತ
ಈ ಪ್ರತಿಕೂಲ.. ಈ ಅಸಮಾಧಾನ 
ಕೇವಲ ನಿನಗೆ.., ನಿನಗೆ.., ನಿನಗೆ

ರಾಘವೇಂದ್ರ. ಕೆ

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ