ಕವನಗಳು

ಆತ್ಮ ಸಂಗಾತಿ

Mar 02, 2026

ಪುಸ್ತಕವು ಕಪಟವಿಲ್ಲದ ಪ್ರಾಮಾಣಿಕ ಸ್ನೇಹಿತ

ನಾನು ಒಂಟಿಭಾವ ತಾಳಿದಾಗ 
ನೀನು ನನ್ನ ಕರೆದಂತಾಗುವುದಾಗ 
ನೀ ಜೊತೆಗಿದ್ದರೆ ಸಾಕೆನಗೆ 
ಈ ಸ್ವಾರ್ಥ ಜಗದ ಗೊಡವೆಯೇ ಬೇಡೆನಗೆ 

ನನ್ನ ಒಂಟಿತನವ ನೀ ನೀಗಿಸಿ 
ಜ್ಞಾನ ಸಂತೋಷವ ಹೆಚ್ಚಿಸಿ 
ನನ್ನ ಬಾಳಿಗೆ ಸ್ಫೂರ್ತಿಯ ನೀಡುತ 
ಹತ್ತಿರವಾಗುವೆ ಇನ್ನಷ್ಟು ಭಾವನಾತ್ಮಕ ಬೆಂಬಲ ನೀಡುತ 

ಆತ್ಮ ಸಂತೋಷವ ಹೆಚ್ಚಿಸುವೆ ನೀನು 
ಈಗೀಗ ಆತ್ಮ ಸಂಗಾತಿಯೇ ನೀನಾಗಿಹೆಯೇನು 
ಯಾರಿರಲಿ ಇರದಿರಲಿ ನನ್ನ ಜೊತೆಯಲಿ 
ದಿನ ಶುರುವಾಗುವುದೇ ನಿನ್ನ ಪ್ರೇರಣೆಯಲಿ 

ನೀನೇ ನನ್ನ ಪ್ರಾಮಾಣಿಕ ಸ್ನೇಹಿತ 
ಸ್ವಾರ್ಥವಿಲ್ಲದೆ ಬಯಸುವೆ ನನ್ನ ಹಿತ 
ನಿನ್ನಲ್ಲಿ ವಂಚನೆ ಕಪಟತನವೆಂಬುದಿಲ್ಲ 
ನನ್ನ ಆತ್ಮದ ಒಂದು ಭಾಗವೇ ನೀನಾಗಿಹೇಯಲ್ಲ 

ಜೀವನದ ಸವಾಲುಗಳು ಎದುರಾದಾಗ 
ನಿನ್ನ ಸಾಂಗತ್ಯವೇ ಆತ್ಮವಿಶ್ವಾಸ ಹೆಚ್ಚಿಸುವುದಾಗ 
ನನ್ನ ಒಳ ಜಗತ್ತನ್ನು ನೀನು ಸಮೃದ್ಧಗೊಳಿಸುವೆ 
ಆತ್ಮತೃಪ್ತಿ ಹೆಚ್ಚಿಸುವ ನೀನೇ ನನ್ನ ಆತ್ಮ ಸಂಗಾತಿಯಾಗಿರುವೆ 

      ನಾಗರತಿ ಚಿಂತಾಮಣಿ 


ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ