ನಿರೂಪಣಾ ಕವನ

ನಡೆ ಮುಂದೆ

Oct 03, 2025

ಕವನ

ನಡೆ ಮುಂದೆ


ನೀ ಮಾಡುವ ಕೆಲಸದಲ್ಲಿ

ಇರಲಿ ಶ್ರದ್ಧೆ ಭಕ್ತಿ

ನೋಯಿಸಿ ಮಾತನಾಡುವವರ

ಮುಂದೆ ಕಿವುಡನಾಗಿಬಿಡು


ಯಾವುದೇ ಕೆಲಸವಿರಲಿ

ಸೋಲು ಗೆಲುವು ನಿಶ್ಚಿತ

ನಕ್ಕ ಜನರ ಮಾತಿಗೆ ಕುಗ್ಗದಿರು

ನಡೆಮುಂದೆ ನಡೆಮುಂದೆ


ಸಾಧನೆಯ ಕಡೆ ಮಾತ್ರ 

ಇರಲಿ ಗಮನ

ಮಾತನಾಡುವ ಜನರ ಬಾಯಿಗೆ 

ಹಾಕಲಾಗದು ಬೀಗ


ನಿನ್ನ ಮೇಲೆ ನಿನಗೆ ನಂಬಿಕೆ 

ಇರಲು ಗೆಲುವು ಖಂಡಿತ

ಕಲ್ಲು ಮುಳ್ಳಿನ ಹಾದಿ ತುಳಿದು

ಸಾಧನೆಯ ಶಿಖರ ಏರು.



ಸುವರ್ಣಾ ಭಟ್ಟ.


ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ