ನಿರೂಪಣಾ ಕವನ
ನೀ ನನ್ನಾತ್ಮದ ಸಂಗಾತಿ
Mar 02, 2026
ಇನ್ನೇನು ಬೇಕು ಈ ಜೀವಕೆ
ನೀನೆಂದರೆ ಅದೆಷ್ಟು ಪ್ರೀತಿ !
ಎಷ್ಟು ? ಎಂದು ಅಳತೆ ಮಾಡಿ ಹೇಳಲಾಗದು ,
ಇಂತಿಷ್ಟೆ ! ಎಂದು ಸಮಾನ ತೋರಿಸಲು ಯಾವುದು ಸಮಾನತೆಯೇ ಇರದು ,
ಹೇಗೆ ತಿಳಿಸಲಿ ? ನಿನಗೆ ನಾನು !!
ನೀನಂದರೆ ನನಗೇ.....!!!
ಹ್ಮೂ...!!
ಮೌನವಾಗಿ ನಿನ್ನ ನೋಡುತ್ತಲೇ
ನಿನ್ನ ಧ್ವನಿ ಕೇಳುತ್ತಲೇ
ಉಳಿದು ಬಿಡುವೆನು ....
ಆದರೆ ನನ್ನ ಪ್ರೀತಿಯ ಪರಿಧಿಯ
ವರ್ಣಿಸಲಾರೆನು ,
ನೀನಾಗಿಯೇ ಅರಿತುಬಿಡು
ನನ್ನೊಲವಿನ ಜೀವವೇ ,
ನನ್ನ ಪ್ರೀತಿ ನಿನಗಾಗಿ ಅನಂತ ಎಂದೆಂದೂ...!!
ನೀ ನನ್ನಾತ್ಮದ ಸಂಗಾತಿ
ನನ್ನ ಉಸಿರಿಗೆ ಒಡತಿ
ಇವೆಲ್ಲದಕ್ಕೂ ಮೀರಿ
ನೀನು ನನ್ನ ಬದುಕಿನಲಿರೆ
ಅದಕ್ಕಿಂತ ಇನ್ನೇನು ಬೇಕು
ನೆಮ್ಮದಿಯ ಮಡಿಲಿನಲಿ ನಾನಿರೆ...!!
-ಆ.ಶೆ.
ಇತ್ತೀಚಿನ ಕಾಮೆಂಟ್‌ಗಳು