ಕವನಗಳು
ಆರೋಗ್ಯ
Apr 07, 2026
ಜೀವನದ ಜಂಜಾಟದಲ್ಲಿ ಮುಳುಗಿದ ನಮಗೆ
ಆರೋಗ್ಯದ ಕೂಗು ಕೇಳುವುದೆಲ್ಲಿ
ಗುರಿಯತ್ತ ಹೆಜ್ಜೆ ಬೆಸೆಯುವ ನಮಗೆ
ದೇಹದ ಭಾಷೆ ಅರಿವಾಗುವುದೆಲ್ಲಿ.
ಎಷ್ಟು ಹಣವಿದ್ದರೇನು
ಆರೋಗ್ಯವೇ ಇಲ್ಲವಾದಲ್ಲಿ
ಎಷ್ಟು ಅವಕಾಶಗಳಿದ್ದರೇನು
ದೇಹಕ್ಕೆ ಶಕ್ತಿ ಇಲ್ಲವಾದಲ್ಲಿ.
ಎಷ್ಟು ಶುಚಿಯಾಗಿದ್ದರೇನು ದೇಹಕ್ಕೆ
ಸುತ್ತಲೂ ಸ್ವಚ್ಛತೆಯೇ ಇಲ್ಲವಾದಲ್ಲಿ
ಎಷ್ಟು ರುಚಿಕರ ಆಹಾರ ಸಿಕ್ಕರೇನು
ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಇಲ್ಲವಾದಲ್ಲಿ.
ಆರೋಗ್ಯವೆಂಬುದು ಕೇವಲ ದೇಹಕಲ್ಲ
ಮನದ ಶಾಂತಿ ಅದು ಆತ್ಮದ ನೆಮ್ಮದಿಯದು
ಆರೋಗ್ಯವೆಂಬುದು ಕೇವಲ ಅದೃಷ್ಟವಲ್ಲ
ನಮ್ಮ ಜೀವನ ಶೈಲಿಯ ಕೈಗನ್ನಡಿ ಅದು.
ದೇಹ ಕೊಡುವ ಎಚ್ಚರಿಕೆಯನ್ನು ಕ್ಷಣಕಾಲ ಗಮನಿಸು
ದೇಹಕ್ಕೆ ಬೇಕಾದ ಪೌಷ್ಟಿಕ ಆಹಾರ ಸೇವಿಸು
ನಿನ್ನ ಆರೋಗ್ಯದ ಬಗ್ಗೆ ಗಮನ ಹರಿಸು
ಮೊದಲು ನಿನ್ನನ್ನು ನೀನು ಕಂಡುಕೊಳ್ಳಲು ಪ್ರಯತ್ನಿಸು.
ಐಶ್ವರ್ಯ ಕೆ ಆರ್
ಇತ್ತೀಚಿನ ಕಾಮೆಂಟ್‌ಗಳು