ನಿರೂಪಣಾ ಕವನ

ಸಮಯದ ಅರಿವು

Dec 01, 2025

ನಿರೂಪಣಾ ಕವನಗಳು

ಸಮಯವು ಅಮೂಲ್ಯವಾದ ವಸ್ತು 
ರೂಢಿಸಿಕೊಳ್ಳಬೇಕು ಜೀವನದಲ್ಲಿ ಸಮಯದೊಂದಿಗಿನ ಶಿಸ್ತು 
ಹಾಳು ಮಾಡಿಕೊಂಡರೆ ಉತ್ತಮ ಸಮಯವನ್ನು 
ಸಮಯವು ಹಾಳುಮಾಡುವುದು ಈಡೀ ಜೀವನವನ್ನು 

ಓಡಬೇಕು ನಿಲ್ಲದೆ ಸಮಯದೊಂದಿಗೆ 
ಒಂದೊಂದೇ ಮೆಟ್ಟಿಲನ್ನೇರುತ್ತಾ ಗುರಿಯೆಡೆಗೆ 
ಒಮ್ಮೆ ನಾವು ನಿಂತರೂ ನಿಲ್ಲದು ಸಮಯ 
ಅರಿವಿರಲಿ ಸಮಯ ಯಾರಿಗೂ ಕಾಯದೆoಬ ವಿಷಯ 

ಸಮಯವೇ ನಮಗೆ ಬುದ್ದಿವಂತ ಸಲಹೆಗಾರ 
ಸಮಯದೊಂದಿಗೆ ಓಡಬೇಕು ನಾವಾಗಿ ಸದಾ ಓಟಗಾರ 
ಅರಿತಾಗ ಸಮಯ ಪರಿಪಾಲನೆಯ ಮಹತ್ವ 
ಅದುವೇ ಯಶಸ್ವಿ ಬದುಕಿಗೆ ಮೂಲತತ್ವ 

ಗುರಿ ಮುಟ್ಟಲು ಸುಲಭವು ಸಮಯದ ಮಹತ್ವ ತಿಳಿದಾಗ 
ಕೊರಗಬೇಕಾಗುವುದು ಉತ್ತಮ ಸಮಯ ಕಳೆದುಕೊಂಡಾಗ 
ಸಮಯವು ಎಂದಿಗೂ ಹಿಂದಿರುಗಿ ಬರಲಾಗದು 
ಗುರಿಯೆಡೆಗೆ ನೆಟ್ಟ ದೃಷ್ಟಿಯಿದ್ದಲ್ಲಿ ಸಮಯವು ವ್ಯರ್ಥವಾಗದು 

               ನಾಗರತಿ ಚಿಂತಾಮಣಿ 

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ