ಕವನಗಳು
ಚಿಗುರು
Nov 04, 2025
ಬದುಕಲು ಬಿಡಿ
ಚಿಗುರಿ ಬೆಳೆಯುವ ಮುನ್ನ
ತುಳಿಯಬೇಡಿರಿ ನೀವು
ಉಸಿರನ್ನು ಕಾಯುವುದು ಹಸಿರು ತಾನೇ
ಎಲ್ಲೋ ಒಂದೆಡೆಯಲ್ಲಿ
ಬದುಕು ಕಟ್ಟುವ ಬಯಕೆ
ತಣ್ಣೀರ ಎರಚದಿರಿ ನನ್ನಾಸೆಗೆ
ನಾಶವಾಗಿಹ ತನ್ನ
ಸಹಚರರ ನೆನೆಯುತ್ತ
ಅಳುತ ಭೂಮಿಯ ಮೇಲೆ ತಲೆ ಎತ್ತಿದೆ
ಹತ್ತಾಗುವುದು ಬಳಿಕ
ಕಿತ್ತುಕೊಳ್ಳುವಿರೇಕೆ
ಸತ್ತು ಹೋಗಲು ಬಿಡದೆ ಬೆಳೆಸಿರೆನನು
ಒಂದಲ್ಲ ಎರಡಲ್ಲ
ಹತ್ತು ನೂರಾರು ಗಿಡ
ನೆಟ್ಟು ನೋಡಿರಿ ಪ್ರಕೃತಿ ನಗುವುದನ್ನು
ಮತ್ತೆ ಹಸಿರಾಗಿರುವ
ಸುತ್ತ ಬಣ್ಣದ ಲೋಕ
ಬತ್ತದೇ ಇರುವಂತ ಕೆರೆ ಬಾವಿಯು
ಸಾಕಿಷ್ಟು ನಮಗಿನ್ನು
ಬೇಕಿಲ್ಲ ಬೇರೇನೂ
ಜಗದೊಳಗೆ ನೆಮ್ಮದಿಯ ಉಸಿರಾಡಲು
✍️ಲತಾ ಧನು ಸೀತಾಂಗೋಳಿ
ಇತ್ತೀಚಿನ ಕಾಮೆಂಟ್ಗಳು