ಕವನಗಳು

ಮಣೆ

Jul 04, 2025

ಮಣೆ

ಮಣೆ ನಾನು ಕುಳಿತುಕೊಳ್ಳಲು ಬೇಕು ಮನುಜರಿಗೆ
ಮಣ ಭಾರವಾದರೂ ಸುಮ್ಮನಿರಬೇಕು
ಹಣೆಬರಹವೆನ್ನದಿದು ಶುಭ ಕಾರ್ಯಕೂ ಬೇಕು
ಹೊಣೆ ಹೆಗಲ ಮೇಲಿಹುದು ಪಾಲಿಸಲೇಬೇಕು

ಕಾಯಿ ತುರಿಯಲು ಬೇಕು ಹೆಂಗಳೆಗೆ ಕೆರೆಮಣೆಯು 
ಬಾಯಿ ಅಗಲದ ಮೆಟ್ಟುಗತ್ತಿಗೂ ಬೇಕು
ತಾಯಿ ಮಗುವನು ಜಳಕ ಮಾಡಿಸಲು ಬೇಕಂತೆ
ಕಾಯ ಹೊರುವೆನು ನಾನು ಎನದೆ ಸಾಕು

ವಿವಿಧ ಉಪಯೋಗದಲಿ ನನ್ನದೇ ಮೇಲುಗೈ
ಸುವಿಚಾರ ಮಾತನಾಡಲು ಬೇಕು ಮುಖ್ಯ
ಸವಿಯ ಭೋಜನ ಉಣಲು ನಾನಿರದೆ ಹೇಗಿರಲಿ
ಕವಿಯ ಲೇಖನಿ ಹೊಗಳಿ ಮಾಡಿಹುದು ಸಖ್ಯ

✍️ ಲತಾ ಧನು ಸೀತಾಂಗೋಳಿ
೦೪-೦೭-೨೦೨೫

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ