ನಿರೂಪಣಾ ಕವನ
ದಯೆ ತೋರಿ ಕಾಪಾಡು
Feb 03, 2026
ಕಷ್ಟದಲಿ ಕಮರುತಿಹೆ ಕಾಪಾಡೆಯಾ
ಮೋಸದಾ ಜಗದೊಳಗೆ ಮಾಸಿಹೋಗಿರುವೆ
ಕಪಟವೆಂಬ ಕಾರ್ಗತ್ತಲಲಿ ಕಳೆದುಹೋಗಿರುವೆ
ನಾಸ್ತಿಕರ ಆಸ್ತಿಯುಪಟಳದಿ ಅಸ್ತವಾಗುತಿರುವೆ
ಸಂಬಂಧವೆಂಬ ಬಂಧನದಿ ಬಂಧಿಯಾಗಿರುವೆ
ದುರಾಸೆಯ ಮರಿಚಿಕೆಗೆ ಮಾರುಹೋಗಿರುವೆ
ಕಾಣದಾ ಕಡಲನ್ನು ಹುಡುಕಿ ಹೊರಟಿರುವೆ
ದಾರಿ ಕಾಣದೆ ಕಂಗೆಟ್ಟು ನಿಂತಿರುವೆ
ದಯೆ ತೋರಿ ಕಾಪಾಡು ಕರುಣಾಮಯ.....
ದಯೆ ತೋರಿ ಕಾಪಾಡು ಕರುಣಾಮಯ.....
ಇತ್ತೀಚಿನ ಕಾಮೆಂಟ್‌ಗಳು